ADVERTISEMENT

ಕೋಟಾ: ನಷ್ಟದಲ್ಲಿ ಕೋಚಿಂಗ್‌ ಕೇಂದ್ರಗಳು

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಬಳಿಕ ಇಳಿಮುಖವಾದ ಸೀಟ್‌ಗಳ ಬೇಡಿಕೆ

ಪಿಟಿಐ
Published 8 ಡಿಸೆಂಬರ್ 2024, 14:55 IST
Last Updated 8 ಡಿಸೆಂಬರ್ 2024, 14:55 IST
.
.   

ಕೋಟಾ (ರಾಜಸ್ಥಾನ): ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಕೋಚಿಂಗ್‌ ಕೇಂದ್ರಗಳ ನೂತನ ಮಾರ್ಗಸೂಚಿ ಬಗೆಗಿನ ನಕಾರಾತ್ಮಕ ಪ್ರಚಾರದಿಂದಾಗಿ ಕೋಟಾದಲ್ಲಿ ಕೋಚಿಂಗ್‌ ಕೇಂದ್ರಗಳು ಮತ್ತು ಹಾಸ್ಟೆಲ್‌ ಉದ್ಯಮಗಳು ನಷ್ಟದಲ್ಲಿವೆ ಎಂದು ಈ ಉದ್ಯಮಗಳಿಗೆ ಸಂಬಂಧಿಸಿದವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಇಲ್ಲಿ ವಾರ್ಷಿಕ 2 ಲಕ್ಷದಿಂದ 2.5 ಲಕ್ಷದಷ್ಟು ವಿದ್ಯಾರ್ಥಿಗಳು ಕೋಚಿಂಗ್‌ ಪಡೆಯುತ್ತಿದ್ದರು. ಆದರೆ, ಪ್ರಸಕ್ತ ವರ್ಷ ಈ ಸಂಖ್ಯೆ 85,000ದಿಂದ ಒಂದು ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ವಾರ್ಷಿಕ ಆದಾಯವು ₹7000 ಕೋಟಿಯಿಂದ ₹3,500 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಕೋಟಾ ಶಿಕ್ಷಣ ವ್ಯವಸ್ಥೆ ಮತ್ತು ಪರಿಸರಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಇದು ಮತ್ತೊಮ್ಮೆ ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ ಎಂದು ‘ಯುನೈಟೆಡ್‌ ಕೌನ್ಸಿಲ್‌ ಆಫ್ ರಾಜಸ್ಥಾನ ಇಂಡಸ್ಟ್ರೀಸ್‌’ನ ವಲಯ ಮುಖ್ಯಸ್ಥ ಗೋವಿಂದ್ರಮ್‌ ಮಿತ್ತಲ್‌ ಹೇಳಿದ್ದಾರೆ.

ADVERTISEMENT

ಕೋಚಿಂಗ್‌ ಕೇಂದ್ರಗಳ ನೂತನ ಮಾರ್ಗಸೂಚಿಯು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ದಾಖಲಾತಿಯನ್ನು ನಿಷೇಧಿಸಿದೆ. ಇದರಿಂದಾಗಿಯೂ ಕೋಚಿಂಗ್‌ಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಕೋಚಿಂಗ್ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳು ಬಿಕ್ಕಟ್ಟು ಎದುರಿಸುತ್ತಿವೆ. ನಗರದ 4500 ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ 40ರಿಂದ 50ರಷ್ಟು ತಗ್ಗಿದೆ. ಸಾಲ ಪಡೆದು ಹಾಸ್ಟೆಲ್ ನಿರ್ಮಿಸಿದ್ದ ಮಾಲೀಕರು ಕಂತುಗಳ ಪಾವತಿಗೆ ಕಷ್ಟಪಡುತ್ತಿದ್ದಾರೆ
ನವೀನ್‌ ಮಿತ್ತಲ್‌ ಕೋಟಾ ಹಾಸ್ಟೆಲ್‌ ಸಂಘಗಳ ಅಧ್ಯಕ್ಷ
ಹಾಸ್ಟೆಲ್‌ನಲ್ಲಿ ಕೋಣೆ ಶುಲ್ಕವು ಮಾಸಿಕ ₹15000ದಿಂದ ₹9000ಕ್ಕೆ ಇಳಿಕೆಯಾಗಿದೆ. ಆದರೂ ಕೋಣೆಗಳು ಖಾಲಿ ಇವೆ‌
ಮಾಣಿಕ್‌ ಸಹಾನಿ ಹಾಸ್ಟೆಲ್‌ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.