ADVERTISEMENT

‘ಡ್ರಗ್ಸ್‌ಗೆ ಗುಜರಾತ್‌ ಹೆಬ್ಬಾಗಿಲು’: ಮೋದಿ, ಶಾ ಮೌನ ಪ್ರಶ್ನಿಸಿದ ಕಾಂಗ್ರೆಸ್‌

ಪಿಟಿಐ
Published 27 ಮೇ 2022, 21:20 IST
Last Updated 27 ಮೇ 2022, 21:20 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಅವರ ಕಣ್ಗಾವಲಿನಲ್ಲಿರುವ ದೇಶಕ್ಕೆ ‘ಡ್ರಗ್ಸ್‌ ಪೂರೈಕೆಯ ಹೆಬ್ಬಾಗಿಲು’ ಆಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ರಾಜ್ಯದ ಮುಂದ್ರಾ ಮತ್ತು ಪುಪವಾವ್ ಸೇರಿ ಹಲವು ಬಂದರುಗಳ ಮೂಲಕ ದೇಶಕ್ಕೆ ಮಾದಕ ದ್ರವ್ಯ (ಡ್ರಗ್ಸ್‌) ಪೂರೈಕೆಯಾಗುತ್ತಿದೆ. ಗುರುವಾರವಷ್ಟೇ ಇರಾನ್‌ನಿಂದ ಮುಂದ್ರಾ ಬಂದರಿಗೆ ಬಂದ ₹500 ಕೋಟಿ ಮೌಲ್ಯದ 52 ಕೆ.ಜಿ ಕೊಕೇನ್ ಅನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ.

ಇದರ ಬಗ್ಗೆ ಮೋದಿ ಮತ್ತು ಅಮಿತ್‌ ಶಾ ಒಂದೇ ಒಂದು ಮಾತು ಆಡದೆ, ಮೌನವಹಿಸಿರುವುದೇಕೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರ್‌ ಪ್ರಶ್ನಿಸಿದ್ದಾರೆ.

ADVERTISEMENT

ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣಿಕ್ಕಿರುವ ತನಿಖಾ ಸಂಸ್ಥೆಗಳೂ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.