ADVERTISEMENT

ಬಿಹಾರದಲ್ಲಿ ಲಘು ಭೂಕಂಪ

ಪಿಟಿಐ
Published 15 ಫೆಬ್ರುವರಿ 2021, 21:55 IST
Last Updated 15 ಫೆಬ್ರುವರಿ 2021, 21:55 IST

ಪಟ್ನಾ: ಬಿಹಾರದ ಕೆಲವು ಭಾಗಗಳಲ್ಲಿ ಸೋಮವಾರ ರಾತ್ರಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿವೆ. ಆದರೆ, ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.

ರಿಕ್ಟರ್‌ ಮಾಪನದಲ್ಲಿ 3.5ರಷ್ಟು ದಾಖಲಾಗಿದೆ. ರಾತ್ರಿ 9.23ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಪಟ್ನಾ ಸಮೀಪವೇ ಕೇಂದ್ರೀಕೃತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಘು ಭೂಕಂಪವಾಗಿದ್ದರಿಂದ ಬಹುತೇಕ ಮಂದಿಗೆ ಯಾವುದೇ ರೀತಿಯ ಅನುಭವವೂ ಆಗಿಲ್ಲ. ಆದರೆ, ಭೂಕಂಪದ ಸುದ್ದಿ ಹಬ್ಬುತ್ತಿ ದ್ದಂತೆ ಹಲವರು ಸಾಮಾಜಿಕ ಮಾಧ್ಯ ಮಗಳ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಸುರಕ್ಷಿತವಾಗಿರಿ’ ಎನ್ನುವ ಸಂದೇಶಗಳನ್ನು ಕಳುಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.