ADVERTISEMENT

ಸಂಸದ ಎ.ರಾಜಾ ಬೇನಾಮಿ ಆಸ್ತಿ ಜಪ್ತಿ: ಇ.ಡಿ

ಕೊಯಮತ್ತೂರು ಜಿಲ್ಲೆಯಲ್ಲಿರುವ ₹55 ಕೋಟಿ ಮೌಲ್ಯದ ಜಮೀನು

ಪಿಟಿಐ
Published 22 ಡಿಸೆಂಬರ್ 2022, 15:55 IST
Last Updated 22 ಡಿಸೆಂಬರ್ 2022, 15:55 IST
ಎ.ರಾಜಾ
ಎ.ರಾಜಾ   

ನವದೆಹಲಿ: ಡಿಎಂಕೆ ಸಂಸದ ಎ.ರಾಜಾ ಅವರಿಗೆ ಸೇರಿದ ₹55 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಲಾಯದ (ಇ.ಡಿ) ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ 45 ಎಕರೆ ಬೇನಾಮಿ ಜಾಗವನ್ನು ಹಣ ಅಕ್ರಮ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದೂ ವಿವರಿಸಿದ್ದಾರೆ.

2004–07ರ ನಡುವೆ ರಾಜಾ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದಾಗ ಗುರುಗ್ರಾಮ ಮೂಲದ ರಿಯಲ್‌ ಎಸ್ಟೇಟ್‌ ಕಂಪನಿಗೆ ಪರಿಸರ ಅನುಮೋದನೆ ನೀಡಿರುವುದಕ್ಕೆ ಪ್ರತಿಯಾಗಿ ಅವರೊಂದಿಗೆ ನಂಟು ಹೊಂದಿರುವ ಕಂಪನಿಯು ಈ ಜಮೀನನ್ನು ಖರೀದಿ ಮಾಡಿತ್ತು ಎಂದೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಜಾಗ ರಾಜಾ ಅವರ ಬೇನಾಮಿ ಕಂಪನಿಯ ಹೆಸರಿನಲ್ಲಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.