ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಮತ್ತು ಅವರೊಟ್ಟಿಗೆ ವಾಸಿಸುತ್ತಿದ್ದ ಸಿದ್ಧಾರ್ಥ ಪಿಠಾಣಿ ಹಾಗೂ ನಟನ ವ್ಯವಸ್ಥಾಪಕರಾಗಿದ್ದ ಶ್ರುತಿ ಮೋದಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಪಿಠಾಣಿ ಮತ್ತು ಶ್ರುತಿ ಇಬ್ಬರಿಗೂ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಇಲ್ಲಿನ ಇ.ಡಿ ಕಚೇರಿಗೆ ಇಬ್ಬರೂ ಹಾಜರಾಗಿದ್ದರು. ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಸಂಬಂಧ ಪ್ರಶ್ನಿಸಲಾಯಿತು. ಶ್ರುತಿ ಅವರನ್ನು ವಾರದ ಹಿಂದೆಯೂ ಪ್ರಶ್ನಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟ ಸುಶಾಂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ದಿನ ನಾನು, ನಟ ವಾಸಿಸುತ್ತಿದ್ದ ಬಾಂಧ್ರಾದ ಫ್ಲಾಟ್ ನಲ್ಲಿಯೇ ಇದ್ದೆ ಎಂದು ಪಿಠಾಣಿ ಅವರು ಈಗಾಗಲೇ ಹಲವು ಸುದ್ದಿ ಚಾನಲ್ ಗಳ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.