ADVERTISEMENT

ಉತ್ತರ ಪ್ರದೇಶ: ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮನೆಯಲ್ಲಿ ಇ.ಡಿ ಶೋಧ

ಪಿಟಿಐ
Published 30 ಡಿಸೆಂಬರ್ 2020, 9:06 IST
Last Updated 30 ಡಿಸೆಂಬರ್ 2020, 9:06 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರ ಮನೆ ಮತ್ತು ಅವರಿಗೆ ಸಂಬಂಧಪಟ್ಟ ಇತರೆ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇ.ಡಿಯು ಲಖನೌ, ಕಾನ್ಪುರ ಮತ್ತು ಅಮೇಥಿಯ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಕಾನ್ಪುರದವರಾದ ಪ್ರಜಾಪತಿ ಅವರಲೆಕ್ಕಪರಿಶೋಧಕ ಅಮೇಥಿಯಲ್ಲಿ ’ಬೇನಾಮಿ ಆಸ್ತಿ‘ ಹೊಂದಿದ್ದಾರೆ ಎನ್ನಲಾಗಿದೆ. ಆ ಸ್ಥಳಗಳಲ್ಲಿ ಮತ್ತು ಪ್ರಜಾಪತಿ ಅವರ ನಿವಾಸ, ಲಖನೌನಲ್ಲಿರುವ ಕಚೇರಿಯಲ್ಲೂ ಇ.ಡಿ ಶೋಧ ನಡೆಸಿದೆ.

ADVERTISEMENT

ಪ್ರಜಾಪತಿಯನ್ನು ಮಾರ್ಚ್‌ 15, 2017ರಲ್ಲಿ ಬಂಧಿಸಲಾಗಿತ್ತು. ಸದ್ಯ ಲಖನೌನ ಕೆಜಿಎಂಯು ಆಸ್ಪತ್ರೆಯಲ್ಲಿಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಗಾಯತ್ರಿ ಪ್ರಜಾಪತಿ ಸಚಿವರಾಗಿದ್ದರು. ಈ ವೇಳೆ ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸಿರುವ ಆರೋಪದಡಿ ಇ.ಡಿ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.