ADVERTISEMENT

'ಲಸಿಕೆ ದಾಸ್ತಾನು ವಾಸ್ತವ ಮಾಹಿತಿಗೆ ವ್ಯವಸ್ಥಿತ ನೆಟ್‌ವರ್ಕ್'

ಪಿಟಿಐ
Published 20 ಸೆಪ್ಟೆಂಬರ್ 2020, 11:57 IST
Last Updated 20 ಸೆಪ್ಟೆಂಬರ್ 2020, 11:57 IST
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಲಭ್ಯವಿರುವ ಲಸಿಕೆ ದಾಸ್ತಾನು ಕುರಿತು ವಾಸ್ತವ ಮಾಹಿತಿ ಒದಗಿಸಲಿರುವ ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್ (ಇವಿನ್) ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಇದರು, ಅಗತ್ಯವನ್ನು ಆಧರಿಸಿ ಕೋವಿಡ್-19 ಲಸಿಕೆ ಪೂರೈಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಭಾನುವಾರ ತಿಳಿಸಿದೆ.

ಈ ಸಂಬಂಧ ತಜ್ಞರ ತಂಡವನ್ನು ರಚಿಸಲಾಗಿದೆ. ಈ ತಂಡವು ಯಾವ ಗುಂಪಿನ ರೋಗಿಗಳಿಗೆ ಮೊದಲು ಲಸಿಕೆ ನೀಡಬೇಕು, ಆಯ್ಕೆ,ಲಸಿಕೆಯ ವಿತರಣಾ ಕಾರ್ಯವಿಧಾನ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿದೆ ಎಂದುಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ತಿಳಿಸಿದರು.

ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್ ಅಡಿ ಲಸಿಕೆ ದಾಸ್ತಾನು, ಸುಮಾರು 25 ಸಾವಿರ ನಿಯೋಜಿತ ಶೀತಲಗೃಹಗಳಲ್ಲಿ ತಾಪಮಾನ ಪ್ರಮಾಣದ ಮಾಹಿತಿ ತಿಳಿಯಲು ಸಹಕಾರಿಯಾಗಿರಲಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.