ADVERTISEMENT

ದಾವೂದಿ ಬೋಹ್ರಾ ಬಹಿಷ್ಕಾರ ಪದ್ಧತಿ ವಿಚಾರಣೆ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 14:30 IST
Last Updated 11 ಅಕ್ಟೋಬರ್ 2022, 14:30 IST
.
.   

ನವದೆಹಲಿ: ಚಿಕ್ಕದಾದ ದಾವೂದಿ ಬೋಹ್ರಾ ಸಮುದಾಯದಲ್ಲಿ ಇರುವ ಬಹಿಷ್ಕಾರ ಪದ್ಧತಿ ಆಚರಣೆಯ ಕುರಿತ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕಪೀಠವು ಮಂಗಳವಾರ ತೀರ್ಪು ಕಾಯ್ದಿರಿಸಿದೆ.

ಹಲವು ದೇಶಗಳಲ್ಲಿ ಹಂಚಿಹೋಗಿರುವ ಶಿಯಾ ಮುಸ್ಲಿಮರಲ್ಲಿನಸುಮಾರು 10 ಲಕ್ಷದಷ್ಟು ಜನಸಂಖ್ಯೆಯ ದಾವೂದಿ ಬೋಹ್ರಾ ಸಮುದಾಯವು ಭಿನ್ನಮತೀಯ ಸದಸ್ಯರನ್ನು ಬಹಿಷ್ಕರಿಸುವ ಹಕ್ಕನ್ನು ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ನೇತೃತ್ವದ ಸಾಂವಿಧಾನಿಕ ಪೀಠವೂ ಎತ್ತಿ ಹಿಡಿದಿತ್ತು.

ದಾವೂದಿ ಬೋಹ್ರಾ ಸಮುದಾಯದಲ್ಲಿ ಆಚರಣೆಯಲ್ಲಿದ್ದ ಬಹಿಷ್ಕಾರ ಆಚರಣೆಯ ಹಕ್ಕಿಗೆ ಸುಪ್ರೀಂ ಕೋರ್ಟ್‌1962ರಲ್ಲಿ ರಕ್ಷಣೆ ನೀಡಿತ್ತು.ಈ ತೀರ್ಪುಮರುಪರಿಶೀಲಿಸಲು ಮತ್ತು ರದ್ದುಗೊಳಿಸಲು 1986ರ ಕೊನೆಯಲ್ಲಿಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ2004ರಡಿಸೆಂಬರ್‌ನಲ್ಲಿ ವಿಚಾರಣೆಗೆ ಬಂದಾಗ, ಏಳು ಸದಸ್ಯರ ವಿಸ್ತೃತ ಪೀಠದ ಬದಲು ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠ ಇತ್ಯರ್ಥಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು.

ADVERTISEMENT

‘1986ರಿಂದ ಈ ಸಮಸ್ಯೆ ಬಾಕಿ ಇದ್ದು, ತಲೆನೋವಾಗಿದೆ. ಸೀಮಿತವಾದ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವುದು ಅಥವಾ ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವಹಿಸುವುದಷ್ಟೇ ನಮ್ಮ ಮುಂದಿರುವ ಆಯ್ಕೆಗಳು’ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎ.ಎಸ್. ಓಕಾ, ವಿಕ್ರಮ್ ನಾಥ್ ಮತ್ತು ಜೆ.ಕೆ. ಮಾಹೇಶ್ವರಿ ಅವರನ್ನು ಒಳಗೊಂಡ ಇದ್ದ ಸಾಂವಿಧಾನಿಕ ಪೀಠ ಹೇಳಿದೆ.

ಕೇಂದ್ರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ದಾವೂದಿಬೋಹ್ರಾ ಬಹಿಷ್ಕಾರ ಪದ್ಧತಿಯನ್ನು ಸಾಂವಿಧಾನಿಕ ಪೀಠ ಎತ್ತಿಹಿಡಿದಿತ್ತು.ಅಷ್ಟೇ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಿಂದ ಈ ತೀರ್ಪಿನ ಮರುಪರಿಶೀಲನೆ ಸಾಧ್ಯವಾಗದೆಂದು ಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಫಾಲಿ ಎಸ್. ನರೀಮನ್, ಇದನ್ನು ವಿಸ್ತೃತ ಪೀಠಕ್ಕೆ ವಹಿಸುವುದೇ ಸೂಕ್ತವೆಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.