ಸಿಬಿಎಸ್ಇ ಪಠ್ಯಕ್ರಮದ 10 ಹಾಗೂ 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಯೊಂದು ವಾಟ್ಸ್ಆ್ಯಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮೇ 4ರಿಂದ ಜೂನ್ 10ರವರೆಗಿನ ಅವಧಿಯಲ್ಲಿ ನಡೆಯಲಿದೆ ಎನ್ನಲಾದ ಪರೀಕ್ಷೆಗಳ ವಿವರವನ್ನು ನಮೂದಿಸಲಾಗಿದೆ.ಮಂಡಳಿಯೇ ಈ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂಬ ಮಾಹಿತಿಯೂ ಅದರಲ್ಲಿ ಇದೆ.
ಆದರೆ, ಸಿಬಿಎಸ್ಇ ಪರೀಕ್ಷೆಗಳು ಮೇ 4ರಿಂದ ಜೂನ್ 10ರೊಳಗಿನ ಅವಧಿಯಲ್ಲಿ ನಡೆಯಲಿವೆ ಎಂದು ಮಂಡಳಿ ಹೇಳಿರುವುದು ನಿಜವಾದರೂ ಆ ಕುರಿತ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯು ಮಂಡಳಿಯು ಬಿಡುಗಡೆ ಮಾಡಿದ್ದಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.