
ಪ್ರಾತಿನಿಧಿಕ ಚಿತ್ರ
ಮುಂಬೈ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಪರಿಹಾರವಾಗಿ ಕೇವಲ ₹3 ಪಾವತಿಯಾಗಿದೆ. ಇನ್ನು ಕೆಲವರಿಗೆ ₹21 ದೊರೆತಿದೆ.
‘ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ನಮಗೆ ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ವಿಮಾ ಪರಿಹಾರವಾಗಿ ₹3 ಪಾವತಿಸುವ ಮೂಲಕ ಅವಮಾನ ಮಾಡಿದೆ ಎಂದು ರೈತರು ಆರೋಪಿಸಿದರು. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ತಮಗೆ ಬಂದಿರುವ ವಿಮೆ ಪರಿಹಾರವನ್ನು ಚೆಕ್ ರೂಪದಲ್ಲಿ ಸರ್ಕಾರಕ್ಕೇ ಮರಳಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ದಿನೊಡಾ, ಕಸವಾ ಮತ್ತು ಕುಟಾಸ ಗ್ರಾಮಗಳಲ್ಲಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ಹೆಚ್ಚಿನ ರೈತರ ಖಾತೆಗಳಿಗೆ ₹3ರಿಂದ ₹21 ಪಾವತಿಯಾಗಿದೆ ಎಂದು ದಿನೊಡಾ ಗ್ರಾಮದ ರೈತರೊಬ್ಬರು ದೂರಿದರು.
‘ರೈತರನ್ನು ಗೌರವಿಸುವುದು ನಿಮಗೆ ತಿಳಿದಿಲ್ಲ. ಆದರೆ, ಅವರನ್ನು ಅವಮಾನಿಸಬೇಡಿ. ವಿಮೆ ಪರಿಹಾರವನ್ನು ಅವರು ಕೇಂದ್ರ ಸರ್ಕಾರಕ್ಕೇ ಮರಳಿಸಿದ್ದಾರೆ’ ಎಂದು ಕಾಂಗ್ರೆಸ್ ಯುವ ಘಟಕದ ವಕ್ತಾರ ಕಪಿಲ್ ಧೋಕೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.