
ಗಾಜಿಯಾಬಾದ್ (ಉತ್ತರ ಪ್ರದೇಶ): ಇರಾನ್‌ನಲ್ಲಿ ಬಂಧನಕ್ಕೊಳಗಾದ ಭಾರತದ ಎಂಜಿನಿಯರ್‌ನ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಭಾರತ ಸರ್ಕಾರ, ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯ ಮತ್ತು ಹಡಗು ನಿರ್ದೇಶನಾಲಯಕ್ಕೆ ಒತ್ತಾಯಿಸಲಾಗಿದೆ.
ಕಳೆದ ತಿಂಗಳು ಇರಾನ್‌ನ ‘ಬಂದರ್ ಅಬ್ಬಾಸ್’ ಬಂದರಿನಲ್ಲಿ ತೈಲ ಹಡಗನ್ನು ತಡೆಹಿಡಿಯಲಾಗಿತ್ತು. ಈ ವೇಳೆ ಬಂಧನಕ್ಕೊಳಗಾದ 16 ಸಿಬ್ಬಂದಿಯಲ್ಲಿ ಭಾರತದ ಕೇತನ್ ಕೂಡ ಒಬ್ಬರು.
‘ದುಬೈನ ಪ್ರೈಮ್ ಟ್ಯಾಂಕರ್ ಎಲ್‌ಎಲ್‌ಸಿ ನಿರ್ವಹಿಸುವ ತೈಲ ಹಡಗು ಎಂ.ಟಿ. ವ್ಯಾಲಿಯಂಟ್ ರೋರ್‌ನಲ್ಲಿ ಕೇತನ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಹಡಗಿನಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದರೆ ಹೊರತು, ಯಾವುದೇ ಕಾನೂನು ಉಲ್ಲಂಘಿಸಿ ಅಪರಾಧ ಮಾಡಿಲ್ಲ’ ಎಂದು ಕೇತನ್ ಅವರ ತಂದೆ ಮುಖೇಶ್ ಮೆಹ್ತಾ ಹೇಳಿದ್ದಾರೆ.
ಮಗ ಮತ್ತು ಇತರ ಸಿಬ್ಬಂದಿಯ ಸುರಕ್ಷಿತ ಬಿಡುಗಡೆಗಾಗಿ ತುರ್ತಾಗಿ ಮಧ್ಯ ಪ್ರವೇಶಿಸಿ ತಕ್ಷಣವೆ ರಾಜತಾಂತ್ರಿಕ ಕ್ರಮಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.