ADVERTISEMENT

ಬೆಂಕಿಗೆ ತುತ್ತಾದ ವಾಣಿಜ್ಯ ಹಡಗು: ಭಾರತೀಯ ಸೇನೆ ನೆರವು

ಪಿಟಿಐ
Published 30 ಜೂನ್ 2025, 16:20 IST
Last Updated 30 ಜೂನ್ 2025, 16:20 IST
<div class="paragraphs"><p>ಪಲ್ಲಾವು ದೇಶದ ಧ್ವಜ ಹೊಂದಿದ ಎಂಟಿ ಯಿ ಛೆಂಗ್‌–6 ವಾಣಿಜ್ಯ ಹಡಗಿನ ಬೆಂಕಿ ನಂದಿಸಲು ನಿರತರಾದ ಭಾರತೀಯ ನೌಕಾಸೇನೆಯ ಹಡಗು</p></div>

ಪಲ್ಲಾವು ದೇಶದ ಧ್ವಜ ಹೊಂದಿದ ಎಂಟಿ ಯಿ ಛೆಂಗ್‌–6 ವಾಣಿಜ್ಯ ಹಡಗಿನ ಬೆಂಕಿ ನಂದಿಸಲು ನಿರತರಾದ ಭಾರತೀಯ ನೌಕಾಸೇನೆಯ ಹಡಗು

   

ಪಿಟಿಐ ಚಿತ್ರ

ನವದೆಹಲಿ: ‘ಪಲ್ಲಾವು ದೇಶದ ಧ್ವಜ ಹೊಂದಿದ ‘ಎಂಟಿ ಯಿ ಛೆಂಗ್‌–6’ ವಾಣಿಜ್ಯ ಹಡಗಿನ ಎಂಜಿನ್‌ನಲ್ಲಿ ಸೋಮವಾರ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ನೆರವಿಗಾಗಿ ಭಾರತೀಯ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿದೆ’ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಗುಜರಾತ್‌ನ ಕಾಂಡ್ಲಾ ಬಂದರಿನ ಮುಖಾಂತರ ಒಮನ್‌ನ ಶಿನಾಸ್‌ನತ್ತ ತೆರಳುತ್ತಿದ್ದ ಹಡಗಿನಲ್ಲಿ ಭಾರತೀಯ ಮೂಲದ 14 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು.  

‘ಭಾನುವಾರ ರಾತ್ರಿ ವೇಳೆ ಹಡಗಿನಿಂದ ನೆರವು ಯಾಚಿಸಿ ಕರೆಬಂದ ತಕ್ಷಣವೇ ಗಲ್ಫ್‌ ಆಫ್‌ ಒಮನ್‌ನಲ್ಲಿ ನಿಯೋಜಿಸಿದ್ದ ‘ಐಎನ್‌ಎಸ್‌ ತಬರ್‌’ ಅನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು’ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.

‘ಹಡಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ವಿದ್ಯುತ್‌ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸೇನಾ ನೌಕೆಯಲ್ಲಿದ್ದ ಅಗ್ನಿಶಾಮಕ ತಂಡ ಹಾಗೂ ಹೆಲಿಕಾಪ್ಟರ್‌ ನೆರವಿನಿಂದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. 13 ಮಂದಿ ನೌಕಾಪಡೆ ಯೋಧರು ಹಾಗೂ 5 ಮಂದಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.