ADVERTISEMENT

ದೌಲತ್‌ಪುರ - ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ

ಪಿಟಿಐ
Published 7 ಜೂನ್ 2024, 10:01 IST
Last Updated 7 ಜೂನ್ 2024, 10:01 IST
<div class="paragraphs"><p>ರೈಲಿನಲ್ಲಿ ಬೆಂಕಿ ಅವಘಡ</p></div>

ರೈಲಿನಲ್ಲಿ ಬೆಂಕಿ ಅವಘಡ

   

(ಪಿಟಿಐ ಚಿತ್ರ)

ಜೈಪುರ (‌ರಾಜಸ್ಥಾನ): ಜೈಪುರದ ಖಾತಿಪುರ ನಿಲ್ದಾಣದ ಬಳಿ ಶುಕ್ರವಾರ ದೌಲತ್‌ಪುರ-ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ 3ನೇ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ADVERTISEMENT

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಒಂದು ಗಂಟೆ ತಡವಾಗಿ ರೈಲು ಹೊರಟಿದೆ ಎಂದು ವಾಯವ್ಯ ರೈಲ್ವೆ ವಕ್ತಾರ ಕ್ಯಾಪ್ಟನ್ ಶಶಿ ಕಿರಣ್ ತಿಳಿಸಿದ್ದಾರೆ.

ಶೌಚಾಲಯದ ಬಳಿ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರೊಬ್ಬರು ತಕ್ಷಣ ಚೈನ್ ಎಳೆದರು. ಇತರ ಪ್ರಯಾಣಿಕರ ಸಹಾಯದಿಂದ ಕೋಚ್ ಅಟೆಂಡರ್ ಬೆಂಕಿಯನ್ನು ನಿಯಂತ್ರಿಸಿದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಬೆಂಕಿ ಹೊತ್ತಿಕೊಂಡಿದ್ದ ಬೋಗಿಯನ್ನು ಬೇರ್ಪಡಿಸಲಾಗಿದ್ದು, ಪ್ರಯಾಣಿಕರನ್ನು ಬೇರೆ ಕೋಚ್‌ಗಳಿಗೆ ಸ್ಥಳಾಂತರಿಸಲಾಗಿದೆ. ಖಾತಿಪುರ ಮತ್ತು ಜಗತ್‌ಪುರ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.