ADVERTISEMENT

ಸುಪ್ರೀಂ ಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ ನಿಧನ

ಪಿಟಿಐ
Published 23 ನವೆಂಬರ್ 2023, 9:22 IST
Last Updated 23 ನವೆಂಬರ್ 2023, 9:22 IST
<div class="paragraphs"><p>ಫಾತಿಮಾ ಬೀವಿ  </p></div>

ಫಾತಿಮಾ ಬೀವಿ

   

ತಿರುವನಂತಪುರಂ: ಸುಪ್ರೀಂ ಕೋರ್ಟ್‌ನ ಥಮ ಮಹಿಳಾ ನ್ಯಾಯಮೂರ್ತಿ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲರಾಗಿದ್ದ ಫಾತಿಮಾ ಬೀವಿ ನಿಧನರಾಗಿದ್ದಾರೆ. 

ಅವರಿಗೆ 96 ವರ್ಷ ವಯಸ್ಸಾಗಿತ್ತು.

ADVERTISEMENT

ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಫಾತಿಮಾ ಬೀವಿ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಫಾತಿಮಾ ಬೀವಿ ಅವರು ಧೈರ್ಯಶಾಲಿ ಮಹಿಳೆಯಾಗಿದ್ದು, ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಗಟ್ಟಿಯಾಗಿದ್ದರೆ ಯಾವುದೇ ಪ್ರತಿಕೂಲತೆಯನ್ನು ಜಯಿಸಬಹುದು ಎಂಬುದಕ್ಕೆ ಫಾತಿಮಾ ಬೀವಿ ಸಾಕ್ಷಿ ಎಂದು ಕೇರಳ ಸಚಿವೆ ವೀಣಾ ಜಾರ್ಜ್‌ ಸಂತಾಪ ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.