ADVERTISEMENT

ಇನ್ನೆಷ್ಟು ದಿನ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ: ರಾಹುಲ್‌ ಕಿಡಿ

ಪಿಟಿಐ
Published 17 ಸೆಪ್ಟೆಂಬರ್ 2020, 6:50 IST
Last Updated 17 ಸೆಪ್ಟೆಂಬರ್ 2020, 6:50 IST
ರಾಹುಲ್‌ ಗಾಂಧಿ 
ರಾಹುಲ್‌ ಗಾಂಧಿ    

ನವದೆಹಲಿ: ‘ಉದ್ಯೋಗವು ಘನತೆಯ ಪ್ರತೀಕ. ಇನ್ನೆಷ್ಟು ದಿನ ನೀವು ದೇಶದ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಒಂದು ಕೋಟಿಗೂ ಅಧಿಕ ಮಂದಿ ಉದ್ಯೋಗ ಬಯಸಿ ಸರ್ಕಾರದ ಪೋರ್ಟಲ್‌ನಲ್ಲಿತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಸದ್ಯ ಲಭ್ಯವಿರುವುದು ಕೇವಲ 1.77 ಲಕ್ಷ ಉದ್ಯೋಗವಷ್ಟೇ ಎಂದು ದಿನಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡಿರುವ ರಾಹುಲ್‌, ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಯುವಕರು ಈ ದಿನವನ್ನು (ಗುರುವಾರ) #ರಾಷ್ಟ್ರೀಯ ನಿರುದ್ಯೋಗಿಗಳ ದಿನ ಎಂದು ಕರೆದಿದ್ದಾರೆ. ದೇಶದ ಆರ್ಥಿಕತೆಯು ಹಳಿ ತಪ್ಪಿದೆ. ಕೇಂದ್ರವು ಯುವಕರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.