ADVERTISEMENT

₹ 99.5 ಲಕ್ಷ ವಿದೇಶಿ ಕರೆನ್ಸಿ ವಶ

ಪಿಟಿಐ
Published 25 ಜೂನ್ 2019, 20:15 IST
Last Updated 25 ಜೂನ್ 2019, 20:15 IST

ಚೆನ್ನೈ (ಪಿಟಿಐ): ಕೊಲಂಬೊದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೀಲಂಕಾ ಪ್ರಜೆಯೊಬ್ಬರಿಂದ ₹ 99.50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ದುಬೈಗೆ ಪ್ರಯಾಣಿಸಲು ಸಿದ್ಧನಾಗಿದ್ದ ಪ್ರಯಾಣಿಕನ ಚಲನವಲಗಳಿಂದ ಅನುಮಾನಗೊಂಡ ಇಲ್ಲಿನ ಕಸ್ಟಮ್ಸ್‌ ಅಧಿಕಾರಿಗಳು, ಆತನನ್ನು ಪ್ರಶ್ನಿಸಿದರು. ಆದರೆ, ಆತ ಸಮರ್ಪಕ ಉತ್ತರ ನೀಡಲಿಲ್ಲ. ಕೊನೆಗೆ ಅಧಿಕಾರಿಗಳು ಬ್ಯಾಗನ್ನು ತಪಾಸಣೆ ನಡೆಸಿದಾಗ ವಿವಿಧ ದೇಶಗಳ ಕರೆನ್ಸಿಗಳು ಪತ್ತೆಯಾದವು ಎಂದು ಅಧಿಕಾರಿಗಳು ಹೇಳಿದ್ದಾರೆ.‌

ಆತನ ಬ್ಯಾಗಿನಲ್ಲಿ ಯುರೊ, ಕುವೈತ್‌ನ ದಿನಾರ್‌, ಯುಎಎಇನ ದಿರ್ಹಾಮ್‌ ಕರೆನ್ಸಿಗಳಿದ್ದವು. ಅವುಗಳ ಒಟ್ಟಾರೆ ಮೊತ್ತ ₹ 99.50 ಲಕ್ಷ.1962ರ ಕಸ್ಟಮ್ಸ್‌ ಕಾಯ್ದೆ ಅನ್ವಯ ಈ ಕರೆನ್ಸಿಗಳನ್ನು ವಶಕ್ಕೆ ಪಡೆದು, ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.