ಮೆಂಧರ್/ಜಮ್ಮು(ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಓಸಿ) ಕಾಳ್ಗಿಚ್ಚು ಆವರಿಸಿದ್ದು, ಆ ಪ್ರದೇಶದಲ್ಲಿದ್ದ ಕೆಲವು ನೆಲಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಲ್‌ಓಸಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಅದು ಕೃಷ್ಣ ಘಾಟಿಯ ಪರ್ವತ ಪ್ರದೇಶದವರೆಗೂ ಆವರಿಸಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಮತ್ತು ಗಾಯಗಳು ಆಗಿಲ್ಲ. ಸ್ಥಳೀಯರೊಂದಿಗೆ ಸೇನೆ ಮತ್ತು ಅರಣ್ಯ ಇಲಾಖೆಯು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.