ADVERTISEMENT

ಬಿಷಪ್‌ ಡಾ.‍ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌ ನಿಧನ

ಪಿಟಿಐ
Published 5 ಮೇ 2021, 5:47 IST
Last Updated 5 ಮೇ 2021, 5:47 IST
ಡಾ.‍ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌
ಡಾ.‍ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌   

ತಿರುವಳ್ಳ(ಕೇರಳ): ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್‌ನ ಮಾಜಿ ಮುಖ್ಯಸ್ಥ ಡಾ.‍ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌ ಅವರು(103) ವಯೊಸಹಜ ಕಾಯಿಲೆಯಿಂದಾಗಿ ಬುಧವಾರ ನಿಧನರಾದರು.

‘ಭಾರತದಲ್ಲಿ ದೀರ್ಘಕಾಲದವರೆಗೆ ಬಿಷಪ್‌ ಆಗಿ ಸೇವೆ ಸಲ್ಲಿಸಿದ ಡಾ.ಪಿಲಿಪೋಸ್‌ ಅವರು ಬೆಳಿಗ್ಗೆ 1.15ರ ಸುಮಾರಿಗೆಕುಂಬನಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಚರ್ಚ್‌ನ ವಕ್ತಾರರು ತಿಳಿಸಿದರು.

2018ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಾ.ಪಿಲಿಪೋಸ್‌ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದರು.

ADVERTISEMENT

ಬಡವರು ಮತ್ತು ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪಿಲಿಪೋಸ್‌ ಅವರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

ಮೊದಲಿನಿಂದಲೇ ಮಿಷನರಿ ಕೆಲಸಗಳತ್ತ ಆಕರ್ಷಿತರಾಗಿದ್ದ ಅವರು 1944ರಲ್ಲಿ ಚರ್ಚ್‌ನ ಧರ್ಮಾಧಿಕಾರಿಯಾಗಿ ನೇಮಕಗೊಂಡರು. ಬಳಿಕ 1953ರಲ್ಲಿ ಚರ್ಚ್‌ನ ಬಿಷಪ್‌ ಆದರು. ಅವರು ಒಟ್ಟು 66 ವರ್ಷಗಳ ಕಾ‍ಲ ಬಿಷಪ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.