ADVERTISEMENT

ವಿಶ್ವಸಂಸ್ಥೆ: ಇಂಟರ್‌ನಲ್ ಜಸ್ಟೀಸ್ ಕೌನ್ಸಿಲ್ ಮುಖ್ಯಸ್ಥರಾಗಿ ಮದನ್ ಲೋಕುರ್ ನೇಮಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 10:51 IST
Last Updated 21 ಡಿಸೆಂಬರ್ 2024, 10:51 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ. ಲೋಕುರ್‌ ಅವರನ್ನು ವಿಶ್ವಸಂಸ್ಥೆಯ ಇಂಟರ್‌ನಲ್‌ ಜಸ್ಟೀಸ್‌ ಕೌನ್ಸಿಲ್‌ನ (ಆಂತರಿಕ ನ್ಯಾಯ ಮಂಡಳಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ತಕ್ಷಣದಿಂದಲೇ ಜಾರಿಯಾಗುವಂತೆ ಅವರನ್ನು ನೇಮಕ ಮಾಡಲಾಗಿದೆ. ಇವರ ಕಾರ್ಯಾವಧಿಯು 2028ರ ನವೆಂಬರ್‌ 12ರವರೆಗೆ ಇರಲಿದೆ.

ಇಂಟರ್‌ನಲ್‌ ಜಸ್ಟೀಸ್‌ ಕೌನ್ಸಿಲ್‌ನ ಮುಖ್ಯಸ್ಥರನ್ನಾಗಿ ನೇಮಿಸಲು ನನಗೆ ಅತೀವ ಸಂತಸವಾಗುತ್ತಿದೆ. ನಿಮ್ಮ ಜೊತೆ ಇತರ ನ್ಯಾಯಮೂರ್ತಿಗಳೂ ಇರಲಿದ್ದಾರೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟರಸ್‌ ಅವರು ನ್ಯಾಯಮೂರ್ತಿ ಮದನ್ ಅವರಿಗೆ ಡಿ.19ರಂದು ಬರೆದ ಪತ್ರದಲ್ಲಿ ಹೇಳಿದ್ದಾರೆ. 

ADVERTISEMENT

ಮದನ್‌ ಅವರು 1953ರಲ್ಲಿ ಜನಿಸಿದವರು. 2012ರಲ್ಲಿ ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2019ರಲ್ಲಿ ಫಿಜಿ ದೇಶದ ಸುಪ್ರೀಂ ಕೋರ್ಟ್‌ನ ಅನಿವಾಸಿ ಸಮಿತಿಯ ನ್ಯಾಯಮೂರ್ತಿಯಾಗಿಯೂ ನೇಮಕವಾಗಿದ್ದರು. ಬೇರೆ ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ವ್ಯಕ್ತಿ ಮದನ್‌ ಅವರಾಗಿದ್ದಾರೆ. 2018ರಲ್ಲಿ ಮದನ್‌ ಅವರು ನಿವೃತ್ತಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.