ADVERTISEMENT

ಚುನಾವಣಾ ಆಯೋಗದಿಂದ 193 ಚಿಹ್ನೆಗಳ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2023, 7:45 IST
Last Updated 23 ಮೇ 2023, 7:45 IST
ಕೇಂದ್ರ ಚುನಾವಣಾ ಆಯೋಗ
ಕೇಂದ್ರ ಚುನಾವಣಾ ಆಯೋಗ   

ನವದೆಹಲಿ: ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಗಳಲ್ಲಿ ಸ್ಪರ್ಧೆಗೆ ನೀಡಲು ಒಟ್ಟು 193 ಚಿಹ್ನೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದೆ.

ವಾಕಿಂಗ್ ಸ್ಟಿಕ್‌, ಬಲೂನ್‌, ಬಳೆ, ಬೇಬಿ ವಾಕರ್, ತಳ್ಳುಗಾಡಿ, ಸೀಟಿ, ಕಿಟಕಿ, ಉಣ್ಣೆ, ಸೂಜಿ,  ಕಲ್ಲಂಗಡಿ, ಪರ್ಸ್, ವಯೊಲಿನ, ವಾಕ್ಯೂಂ ಕ್ಲೀನರ್ ಸೇರಿ ಹಲವು ಚಿಹ್ನೆಗಳು ಈ ಪಟ್ಟಿಯಲ್ಲಿವೆ.

ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಮಾನ್ಯತೆಯುಳ್ಳ ಪಕ್ಷಗಳ ಅಭ್ಯರ್ಥಿಗಳು ಅಧಿಕೃತ ಚಿಹ್ನೆಯಡಿ ಸ್ಪರ್ಧಿಸುವರು. ಈ ವರ್ಷಾಂತ್ಯ, 2024ರ ಜನವರಿಯಲ್ಲಿ ಮಿಜೋರಾಂ, ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.