ADVERTISEMENT

ಜ.23ರಿಂದಲೇ ಗಣರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 19:33 IST
Last Updated 15 ಜನವರಿ 2022, 19:33 IST
ರಾಷ್ಟ್ರ ಧ್ವಜ
ರಾಷ್ಟ್ರ ಧ್ವಜ   

ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಾಚರಣೆಯು ಇನ್ನು ಮುಂದೆ ಜನವರಿ 24ರ ಬದಲಿಗೆ ಒಂದು ದಿನ ಮೊದಲು ಅಂದರೆ ಜನವರಿ 23ರಿಂದ ಆರಂಭವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನವೂ ಜನವರಿ 23 ಆಗಿದ್ದು, ಆ ದಿನವನ್ನು ಕೇಂದ್ರ ಸರ್ಕಾರ ಈ ಮೂಲಕ ಸ್ಮರಿಸಲು ಮುಂದಾಗಿದೆ.

ಈ ರೀತಿಯ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಸ್ಮರಿಸಲಿದೆ. ಈಗಾಗಲೇ ಬೋಸ್‌ ಅವರ ಜನ್ಮ ದಿನವನ್ನು ‘ಪರಾಕ್ರಮ್‌ ದಿವಸ್‌’ ಎಂದು ಕೇಂದ್ರ ಸರ್ಕಾರ ಆಚರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT