ADVERTISEMENT

ಮೂವರ ಮೇಲೆ ಅತ್ಯಾಚಾರ

ಪಿಟಿಐ
Published 18 ಮೇ 2019, 19:05 IST
Last Updated 18 ಮೇ 2019, 19:05 IST

ಜೈಪುರ: ಅಲ್ವಾರ್ ಸೇರಿದಂತೆ ರಾಜಸ್ಥಾನದ ಮೂರು ಕಡೆಗಳಲ್ಲಿ ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ.

ಅಲ್ವಾರ್‌ನ ಹಸ್ರೌರ ಗ್ರಾಮದಲ್ಲಿ ಮೇ 14ರಂದು 15 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಇನ್ನಿಬ್ಬರನ್ನು ಮಾರನೆಯ ದಿನ ಬಾಲಕಿಯ ಕುಟುಂಬದವರು ಹಿಡಿದು ಥಳಿಸಿದ್ದಾರೆ. ಕೆಲವು ತಾಸುಗಳ ಬಳಿಕ ಒಬ್ಬ ಆರೋಪಿ ರಸ್ತೆಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ಯಾರಿಸ್ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ADVERTISEMENT

‘ಬಾಲಕಿಯ ಕುಟುಂಬ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಮೃತಆರೋಪಿಯ ಕುಟುಂಬದವರು ಬಾಲಕಿಯ ಸೋದರ ಹಾಗೂ ಇತರರ ವಿರುದ್ಧ ದೂರುದಾಖಲಿಸಿದ್ದಾರೆ.ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಾಪರಾಧಿ ಪರಿವರ್ತನಾ ಗೃಹಕ್ಕೆ ಕಳುಹಿಸಲಾಗುವುದು’ಎಂದು ಅವರು ತಿಳಿಸಿದ್ದಾರೆ.

ಸಂಬಂಧಿಕನಿಂದಲೇ ಕೃತ್ಯ: ಭನಿಪು ಪ್ರದೇಶದ ಚುರುವಿನಲ್ಲಿ ಆರು ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ನಡೆಸಿದ್ದಾನೆ. ಬಾಲಕಿಯ ಸಂಬಂಧಿಕನಾಗಿರುವಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಧೋಲಪುರದ ಖುರ್ದ್ ಗ್ರಾಮದಲ್ಲಿ ಎಂಟರ ಬಾಲಕಿ ಮೇಲೆ 18 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಪರ್ವೇಶ್ ಎಂದು ಗುರುತಿಸಲಾಗಿರುವ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.