ADVERTISEMENT

ಮುಷ್ಕರದಿಂದ ದೂರ ಉಳಿದ ಗಿಲಾನಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 10:44 IST
Last Updated 15 ಏಪ್ರಿಲ್ 2021, 10:44 IST
ಸಯ್ಯದ್‌ ಅಲಿ ಗಿಲಾನಿ
ಸಯ್ಯದ್‌ ಅಲಿ ಗಿಲಾನಿ   

ಶ್ರೀನಗರ: ಕಾಶ್ಮೀರ ಜನತೆ ಶುಕ್ರವಾರ ಮುಷ್ಕರ ನಡೆಸಬೇಕು ಎಂದು ನೀಡಿದ್ದ ಕರೆಗೆ ಪ್ರತ್ಯೇಕತಾವಾದಿ ನಾಯಕ ಸಯ್ಯದ್‌ ಅಲಿ ಗಿಲಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರಿಂದ, ಅಬ್ದುಲ್ಲಾ ಗಿಲಾನಿ ನೇತೃತ್ವದ ಪಾಕಿಸ್ತಾನ ಮೂಲದ ಹುರಿಯತ್‌ ಸಂಘಟನೆಗೆ ಮುಜುಗರವಾಗಿದೆ. ಈ ಮುಷ್ಕರಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸಯ್ಯದ್‌ ಅಲಿ ಗಿಲಾನಿ ತಿಳಿಸಿದ್ದಾರೆ.

ಇತ್ತೀಚೆಗೆ ಎನ್‌ಕೌಂಟರ್‌ಗಳಲ್ಲಿ ನಡೆದ ಹತ್ಯೆಯನ್ನು ಖಂಡಿಸಿ ಶುಕ್ರವಾರ ಮುಷ್ಕರಕ್ಕೆ ಕರೆ ನೀಡಲಾಗಿತ್ತು.

ADVERTISEMENT

ಮುಷ್ಕರಕ್ಕೆ ಸಂಬಂಧಿಸಿದಂತೆ ಗಿಲಾನಿ ಅವರ ಹೆಸರಿನಲ್ಲಿ ಬರೆದಿರುವ ಪತ್ರವು ನಕಲಿಯಾಗಿದೆ. ಅಂತಹ ಯಾವುದೇ ಪತ್ರ ಬರೆದಿಲ್ಲ ಎಂದು ಗಿಲಾನಿ ಕುಟುಂಬ ತಿಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

‘ಮುಷ್ಕರದ ಬಗ್ಗೆ ಗಿಲಾನಿ ಅವರು ಯಾವುದೇ ಟ್ವೀಟ್‌ ಸಹ ಮಾಡಿಲ್ಲ. ಈ ಬಗ್ಗೆ ಅವರ ಕುಟುಂಬದ ಸದಸ್ಯರ ಜತೆ ಮಾತನಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಹುರಿಯತ್‌ ಕಾನ್ಫೆರೆನ್ಸ್‌ ಅಧ್ಯಕ್ಷ ಸ್ಥಾನಕ್ಕೆ ಗಿಲಾನಿ ಅವರು ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.