ADVERTISEMENT

ರಾಂಚಿ: ಏಳು ಬಾಲಕರಿಂದ ಸಾಮೂಹಿಕ ಅತ್ಯಾಚಾರ

ಪಿಟಿಐ
Published 29 ಆಗಸ್ಟ್ 2021, 11:42 IST
Last Updated 29 ಆಗಸ್ಟ್ 2021, 11:42 IST
   

ರಾಂಚಿ: ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ಏಳು ಬಾಲಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಕೃತ್ಯ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ನಾಲ್ವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರರಿಗೆ ಶೋಧ ಮುಂದುವರಿದಿದೆ. ಕೃತ್ಯ ಆ. 26ರಂದು ನಡೆಸಿದ್ದು, ಆರೋಪಿಗಳಲ್ಲಿ ಒಬ್ಬ ಸಂತ್ರಸ್ತೆಗೆ ಪರಿಚಿತನೇ ಆಗಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೂ ಗೆಳೆಯರು ಕಾಯುತ್ತಿದ್ದ ನಿರ್ಜನ ಪ್ರದೇಶಕ್ಕೆ ಪರಿಚಿತ ಬಾಲಕಿಯನ್ನು ಮೋಟರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಹುಡುಗರನ್ನು ನೋಡಿದ ಬಾಲಕಿ ಓಡಲು ಯತ್ನಿಸಿದ್ದು, ಸಫಲಳಾಗಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಕೃತ್ಯದ ನಂತರ ಪರಿಚಿತನೇ ಮರಳಿ ಮನೆಗೆ ಕರೆತಂದಿದ್ದು, ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಬಂಧಿತ ಎಲ್ಲರೂ ಮಂದರ್‌ ಪ್ರದೇಶದ ನಿವಾಸಿಗಳು ಎಂದು ತಿಳಿಸಿದ್ದಾರೆ.

ಪೋಕ್ಸೊ ಮತ್ತು ಐಪಿಸಿ ಅನ್ವಯ ಮೊಕದ್ದಮೆ ದಾಖಲಿಸಿದ್ದು, ಬಂಧಿತರನ್ನು ಬಾಲಮಂದಿರದ ವಶಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾಧಿಕಾರಿಯು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.