ADVERTISEMENT

ಗ್ಲೋಬಲ್‌ ವಿದ್ಯಾರ್ಥಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಮಹಾರಾಷ್ಟ್ರದ ಶಿಕ್ಷಕ

ಪಿಟಿಐ
Published 9 ಮೇ 2021, 13:10 IST
Last Updated 9 ಮೇ 2021, 13:10 IST
ರಂಜಿತ್ ಸಿನ್ಹಾ ದಿಸಾಳೆ
ರಂಜಿತ್ ಸಿನ್ಹಾ ದಿಸಾಳೆ   

ಲಂಡನ್: 2020ನೇ ಸಾಲಿಗೆ ಗ್ಲೋಬಲ್‌ ಟೀಚರ್ ಪ್ರಶಸ್ತಿ ಪುರಸ್ಕೃತರಾಗಿದ್ದ, ಮಹಾರಾಷ್ಟ್ರದ ಸೋಲ್ಹಾಪುರ ಜಿಲ್ಲೆಯ ಪರಿಟೇವಾಡಿಯ ಶಿಕ್ಷಕ ರಂಜಿತ್‌ಸಿನ್ಹಾ ದಿಸಾಳೆ ಈಗ, ‘ಗ್ಲೋಬಲ್‌ ವಿದ್ಯಾರ್ಥಿ ಪ್ರಶಸ್ತಿ’ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.

ಗ್ಲೋಬಲ್ ವಿದ್ಯಾರ್ಥಿ ಪ್ರಶಸ್ತಿ ಮೊತ್ತ ಸುಮಾರು ₹ 36,62,725 (50 ಸಾವಿರ ಡಾಲರ್) ಆಗಿದೆ. ಹಾಲಿವುಡ್‌ ನಟರಾದ ಅಸ್ತೊನ್‌ ಕುಚ್ಚರ್‌ ಮತ್ತು ಮಿಲಾ ಕುನಿಸ್‌ ಅವರು ತೀರ್ಪುಗಾರ ಮಂಡಳಿಯ ಇತರೆ ಸದಸ್ಯರಾಗಿದ್ದಾರೆ.

ಚೆಗ್‌ ಶಿಕ್ಷಣ ತಂತ್ರಜ್ಞಾನ ಕಂಪನಿಯ ಸೇವಾ ಸಂಸ್ಥೆಯಾದ ಚೆಗ್.ಒಆರ್‌ಜಿ ಮತ್ತು ವಾರ್ಕೆ ಫೌಂಡೇಷನ್ ಜಂಟಿಯಾಗಿ ಕಳೆದ ವರ್ಷ ಗ್ಲೋಬಲ್‌ ಟೀಚರ್‌ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಕಲಿಕೆ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ಗಣನೀಯ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ವಿದ್ಯಾರ್ಥಿ ಪ್ರಶಸ್ತಿಯ ಉದ್ದೇಶ.

ADVERTISEMENT

ವಿದ್ಯಾರ್ಥಿಗಳಿಗೆ ಅಪರಿಮಿತ ಅವಕಾಶವಿದ್ದು, ಜಗತ್ತೆ ಹತ್ತಿರವಾಗಿದೆ. ಅವರಿಗೆ ಪೂರಕವಾದ ಶಿಕ್ಷಣವು ಲಭಿಸಿದರೆ ಅವರು ಎಷ್ಟು ಮೌಲ್ಯಯುಳ್ಳವರು ಎಂಬುದು ನಮಗೆ ಅರಿವಾಗಲಿದೆ ಎಂದು ದಿಸಾಳೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.