ನವದೆಹಲಿ: ಕೋವಿಡ್ ಸಂಬಂಧಿತ ಮಾಸ್ಕ್, ಲಸಿಕೆ, ಪಿಪಿಇ ಕಿಟ್‌ಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವ ಕುರಿತು ಸಲಹೆ ನೀಡಲು ರಚಿಸಿದ್ದ ಸಚಿವರ ಸಮಿತಿಯು ಸೋಮವಾರ ಈ ಸಂಬಂಧ ವರದಿ ಸಲ್ಲಿಸಿದೆ.
ಜಿಎಸ್‌ಟಿ ಮಂಡಳಿ ಸಭೆ ಬಳಿಕ ಮೇ 28ರಂದು ಸಮಿತಿ ರಚಿಸಿದ್ದು, ಜೂನ್ 8ರ ಒಳಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಇದ್ದ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ವರದಿ ಸಲ್ಲಿಸಿದರು.
ವರದಿ ಕುರಿತು ಶೀಘ್ರದಲ್ಲಿಯೇ ಸೇರಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸುವ ಸಂಭವವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.