ADVERTISEMENT

‘ಕಾರಣ ಕೇಳದೇ ವಿದೇಶಿಯರ ಉಚ್ಚಾಟನೆಗೆ ಅವಕಾಶ ಇದೆ’

ದೆಹಲಿ ಹೈಕೋರ್ಟ್‌ಗೆ ಗೃಹ ಸಚಿವಾಲಯ ಮಾಹಿತಿ

ಪಿಟಿಐ
Published 7 ಮೇ 2019, 20:00 IST
Last Updated 7 ಮೇ 2019, 20:00 IST
   

ನವದೆಹಲಿ: ಅಧಿಕೃತ ವೀಸಾ ಹೊಂದಿದ್ದರೂ, ಕಾರಣ ಕೇಳಿ ನೋಟಿಸ್‌ ನೀಡದೇ ವಿದೇಶಿಯರನ್ನು ಉಚ್ಚಾಟನೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಗೃಹ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ಹೇಳಿದೆ.

ಮುಖ್ಯನ್ಯಾಯಮೂರ್ತಿ ರಾಜೇಂದ್ರ ಮೆನನ್‌, ನ್ಯಾಯಮೂರ್ತಿ ಎ.ಜೆ.ಭಂಭಾನಿ ಅವರನ್ನು ಒಳಗೊಂಡಿರುವ ನ್ಯಾಯಪೀಠಕ್ಕೆ ಗೃಹ ಸಚಿವಾಲಯ ಪರ ವಕೀಲ ಅನುರಾಗ್‌ ಅಹ್ಲುವಾಲಿಯಾ ಅಫಿಡವಿಟ್‌ ಸಲ್ಲಿಸಿದ್ದಾರೆ.

ಭದ್ರತೆ ಕಾರಣವೊಡ್ಡಿ ದೇಶ ಬಿಟ್ಟು ಹೋಗುವಂತೆ ತನಗೆ ಗೃಹ ಸಚಿವಾಲಯ ಪಾಕಿಸ್ತಾನ ಮೂಲದ ಪತ್ನಿಗೆ ನೀಡಿದ್ದ ಸೂಚನೆಯನ್ನು ಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಗೃಹ ಸಚಿವಾಲಯ ಈ ಅಫಿಡವಿಟ್‌ ಸಲ್ಲಿಸಿದೆ.

ADVERTISEMENT

‘ದೇಶ ಬಿಟ್ಟು ಹೋಗುವಂತೆ ಯಾವುದೇ ವಿದೇಶಿ ವ್ಯಕ್ತಿಗೆ ನೋಟಿಸ್‌ ನೀಡಿದರಾಯಿತು, ಅಧಿಕೃತ ವೀಸಾ ಹೊಂದಿದ್ದರೂ ಈ ದೇಶದಲ್ಲಿ ಇರಲು ಆ ವ್ಯಕ್ತಿಗೆ ಯಾವುದೇ ಅಧಿಕಾರ ಇರುವುದಿಲ್ಲ. ದೇಶ ಬಿಟ್ಟು ಹೋಗಿ ಎಂಬ ಸೂಚನೆಯೇ ಅವರ ವೀಸಾ ರದ್ದು ಮಾಡಿರುವ ಆದೇಶವೂ ಆಗಿರುತ್ತದೆ’ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಮೇ 13ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

37 ವರ್ಷದ ಮಹಿಳೆ 2005ರಲ್ಲಿ ಭಾರತದ ವ್ಯಕ್ತಿಯನ್ನು ಮದುವೆಯಾದ ನಂತರ ದೆಹಲಿಯಲ್ಲಿ ನೆಲೆಸಿದ್ದು, ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಮಹಿಳೆಯ ವೀಸಾ ಅವಧಿ 2020ರ ವರೆಗೆ ಇದ್ದರೂ, ದೇಶ ಬಿಟ್ಟು ಹೋಗುವುಂತೆ ಆಕೆಗೆ ಸೂಚಿಸಲಾಗಿದೆ.

ನಗರ ಪೊಲೀಸರ ನೆರವಿನೊಂದಿಗೆ ತನಿಖೆ ನಡೆಸಲಾಗುವುದು’ ಎಂದು ಪಶ್ಚಿಮ ರೈಲ್ವೆ ಪಿಆರ್‌ಒ ರವಿಂದರ್‌ ಭಾಕರ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.