ADVERTISEMENT

ಮನಮೋಹನ ಸಿಂಗ್ ಅವರ ಸ್ಮಾರಕ ವಿಚಾರ; ಕೀಳುಮಟ್ಟದ ರಾಜಕೀಯ: ನಡ್ಡಾ

ಪಿಟಿಐ
Published 28 ಡಿಸೆಂಬರ್ 2024, 22:09 IST
Last Updated 28 ಡಿಸೆಂಬರ್ 2024, 22:09 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ನವದೆಹಲಿ: ಮನಮೋಹನ ಸಿಂಗ್ ಅವರ ಸ್ಮಾರಕದ ವಿಚಾರದಲ್ಲಿ ಕಾಂಗ್ರೆಸ್‌ ‘ಕೀಳುಮಟ್ಟದ ರಾಜಕೀಯ’ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.

ಸರ್ಕಾರವು ಸಿಂಗ್‌ ಅವರಿಗೆ ಅವಮಾನ ಮಾಡಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಅವರು, ‘ಮಾಜಿ ಪ್ರಧಾನಿ ಅವರ ನಿಧನದ ದುಃಖದ ನಡುವೆಯೂ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಮಾಡುವುದನ್ನು ಬಿಡದಿರುವುದು ಅತ್ಯಂತ ದುರದೃಷ್ಟಕರ’ ಎಂದಿದ್ದಾರೆ.

‘ಸಿಂಗ್ ಬದುಕಿದ್ದಾಗ ಅವರಿಗೆ ನಿಜವಾದ ಗೌರವವನ್ನು ನೀಡದ ಕಾಂಗ್ರೆಸ್ ಈಗ ಅವರ ಗೌರವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ದೂರಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.