ADVERTISEMENT

ಕೇಂದ್ರ ಸರ್ಕಾರದ ನೀತಿಯಿಂದ ಕೋಟ್ಯಂತರ ಜನರ ಉದ್ಯೋಗ ನಷ್ಟ : ರಾಹುಲ್‌ ಗಾಂಧಿ

ಪಿಟಿಐ
Published 10 ಸೆಪ್ಟೆಂಬರ್ 2020, 7:38 IST
Last Updated 10 ಸೆಪ್ಟೆಂಬರ್ 2020, 7:38 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ಸರ್ಕಾರವು ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮೋದಿ ಸರ್ಕಾರದ ನೀತಿಗಳಿಂದಾಗಿ ಜಿಡಿಪಿಯು ಕುಸಿದಿದೆ. ಕೇಂದ್ರ ಸರ್ಕಾರವು ಭಾರತದ ಯುವ ಜನರ ಭವಿಷ್ಯವನ್ನು ಹತ್ತಿಕ್ಕಿದೆ. ಅವರ ಧ್ವನಿಯನ್ನು ಸರ್ಕಾರಕ್ಕೆ ಕೇಳುವಂತೆ ಮಾಡೋಣ. ಇದಕ್ಕಾಗಿಗುರುವಾರ ಬೆಳಿಗ್ಗೆ 10 ರಿಂದ 10 ಗಂಟೆಗಳ ಕಾಲ ನಡೆಯಲಿರುವ ಕಾಂಗ್ರೆಸ್‌ ಪಕ್ಷದ ‘ ಸ್ಪೀಕ್ ಅಪ್‌‌ ಫಾರ್‌ ಜಾಬ್ಸ್‌’ ಎಂಬ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ.

‘ಮೋದಿ ಸರ್ಕಾರವು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು. ಆದರೆ ಈ ಆರು ವರ್ಷಗಳಲ್ಲಿ 12 ಕೋಟಿ ಉದ್ಯೋಗ ಸೃಷ್ಟಿಸುವ ಬದಲು 14 ಕೋಟಿ ಜನರ ಕೆಲಸಗಳನ್ನು ಕಿತ್ತುಕೊಂಡಿದೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಟೀಕಿಸಿದರು.

ADVERTISEMENT

‘ನೀವೆಲ್ಲರು #SpeakUpForJobs ಅಭಿಯಾನದಲ್ಲಿ ಭಾಗಿಯಾಗಿ ಬಿಜೆಪಿಯ ತಪ್ಪು ನೀತಿಗಳ ವಿರುದ್ಧ ಧ್ವನಿ ಎತ್ತಬೇಕು’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.