ADVERTISEMENT

ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಕೆ ಮುಂದುವರಿಕೆ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 14:26 IST
Last Updated 22 ಮಾರ್ಚ್ 2022, 14:26 IST
ಕೈಲಾಶ್ ಚೌಧರಿ
ಕೈಲಾಶ್ ಚೌಧರಿ   

ನವದೆಹಲಿ: ‘ಬೆಲೆ ಏರಿಕೆಯ ನಡುವೆಯೂ ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸುವುದನ್ನು ಮುಂದುವರಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

‘ಪ್ರತಿ ಚೀಲಕ್ಕೆ ₹ 1,200ರಷ್ಟು ಬೆಲೆ ಏರಿದಾಗಲೂ ಕೇಂದ್ರ ಸರ್ಕಾರವು ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯುವಂತೆ ಮಾಡಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಎಐಎಂಐಎಂ ಸದಸ್ಯ ಇಮ್ತಿಯಾಜ್ ಜಲೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೈಲಾಶ್ ಅವರು, ‘ಪ್ರತಿ ಚೀಲಕ್ಕೆ ₹ 600ರಷ್ಟು ಸಬ್ಸಿಡಿ ಇದೆ. ಇಂದು ಪ್ರತಿ ಚೀಲ ರಸಗೊಬ್ಬರದ ಮೇಲೆ ₹ 4,200ಕ್ಕೆ ತಲುಪಿದೆ. ಆದರೂ, ಕೇಂದ್ರ ಸರ್ಕಾರ ₹ 2,600ರಷ್ಟು ಸಬ್ಸಿಡಿ ನೀಡುವ ಮೂಲಕ ಪ್ರತಿ ಚೀಲಕ್ಕೆ ₹ 1,200 ದರದಲ್ಲಿ ರೈತರಿಗೆ ಪೂರೈಸುತ್ತಿದೆ. ಅಗತ್ಯವಿದ್ದಾಗ, ಎಲ್ಲಿಂದ ತರಬೇಕಾದರೂ ರೈತರಿಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.