ADVERTISEMENT

ಗುಜರಾತಿಗಳು ಬಿಹಾರ, ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆತರುತ್ತಿದ್ದಾರೆ: ಮಮತಾ

ಏಜೆನ್ಸೀಸ್
Published 4 ಏಪ್ರಿಲ್ 2021, 16:53 IST
Last Updated 4 ಏಪ್ರಿಲ್ 2021, 16:53 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಹೌರಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಗುಜರಾತಿಗಳು ಬಂಗಾಳವನ್ನು ವಶಕ್ಕೆ ಪಡೆಯುವ ಸಲುವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗೂಂಡಾಗಳನ್ನು ಕರೆತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ ಮಾತನಾಡಿದ ಮಮತಾ, ʼಮೋದಿ ಸಿಂಡಿಕೇಟ್‌ 1 ಮತ್ತು ಅಮಿತ್‌ ಶಾ ಸಿಂಡಿಕೇಟ್‌ 2. ಅವರು ಅಭಿಷೇಕ್, ಸುದೀಪ್‌ ಮತ್ತು ಸ್ಟಾಲಿನ್‌ ಮಗಳ‌ ಮನೆಗಳಿಗೆ ಏಜೆನ್ಸಿಗಳನ್ನು ಕಳುಹಿಸುತ್ತಾರೆ. ಅವರು ನಿರಂತರವಾಗಿ ಪೊಲೀಸ್‌ ಅಧಿಕಾರಿಗಳನ್ನು ಬದಲಿಸುತ್ತಾರೆ. ಗುಜರಾತಿಗಳು ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗೂಂಡಾಗಳನ್ನು ಕರೆತರುವ ಮೂಲಕಬಂಗಾಳವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯು ಕೋಮು ಗೊಂದಲನ್ನು ಸೃಷ್ಟಿಸಲುಪ್ರಯತ್ನಿಸುತ್ತಿದೆ. ನಾವು ಬಂಗಾಳವನ್ನು ಗುಜರಾತ್‌ ಆಗಲು ಬಿಡುವುದಿಲ್ಲʼ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ರೈತರಿಗೆ 18 ಸಾವಿರ ರೂ. ನೀಡಲಾಗುವುದು ಎಂದು ಹೇಳಿರುವ ಪ್ರಧಾನಿ ಮೋದಿ ಹೇಳಿಕೆಯನ್ನು ಉಲ್ಲೇಖಿಸಿದ ಮಮತಾ, ʼಅವರು (ಬಿಜೆಪಿ) ರೈತರಿಗೆ ಹಣ ನೀಡುವುದಾಗಿ ದೊಡ್ಡ ಹೇಳಿಕೆ ನೀಡುತ್ತಿದ್ದಾರೆ. ನಾನು ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇನೆ. ಅವರು ಏಕೆ ಹಣ ಕಳುಹಿಸುತ್ತಿಲ್ಲ?ʼ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಬಂಗಾಳ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ಏಪ್ರಿಲ್‌6 ರಂದು ನಡೆಯಲಿದೆ. ಆ ಹಿನ್ನಲೆಯಲ್ಲಿ ತಾರಕೇಶ್ವರದಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ʼಮೇ2ರ ನಂತರ ರಚನೆಯಾಗುವ ಸರ್ಕಾರ ಡಬಲ್‌ ಇಂಜಿನ್‌ ಸರ್ಕಾರವಷ್ಟೇ ಆಗಿರುವುದಿಲ್ಲ. ಅಷ್ಟಲ್ಲದೆ,ಎರಡೆರಡು ಹಾಗೂ ನೇರ ಲಾಭವನ್ನೂ ನೀಡಲಿದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನಾನೂ ಹಾಜರಾಗಲಿದ್ದೇನೆʼ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.