ADVERTISEMENT

ಹರಿಯಾಣ: ಸಹಪಾಠಿಗೇ ಗುಂಡಿಕ್ಕಿದ 11ನೇ ತರಗತಿ ವಿದ್ಯಾರ್ಥಿ

ಪಿಟಿಐ
Published 9 ನವೆಂಬರ್ 2025, 13:46 IST
Last Updated 9 ನವೆಂಬರ್ 2025, 13:46 IST
.
.   

ಗುರುಗ್ರಾಮ: ತಂದೆಯ ಬಳಿ ಇದ್ದ, ಪರವಾನಗಿ ಪಡೆದ ಬಂದೂಕಿನಿಂದ 11ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೇ ಗುಂಡಿಕ್ಕಿರುವ ಘಟನೆ ಸೆಕ್ಟರ್‌ 48ನ ಫ್ಲ್ಯಾಟ್‌ವೊಂದರಲ್ಲಿ ನಡೆದಿದೆ.

ಗುಂಡು ವಿದ್ಯಾರ್ಥಿಯ ಕುತ್ತಿಗೆ ಹೊಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.

ಸಾದರ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂದೂಕು, ಎರಡು ಮ್ಯಾಗಜಿನ್ಸ್‌, 70 ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

‘ಶನಿವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಬಾಡಿಗೆ ಫ್ಲ್ಯಾಟ್‌ನಲ್ಲಿ ಮೂವರೂ ಸಹಪಾಠಿಗಳು ಇದ್ದರು’ ಎಂದು ಪೊಲೀಸರು ತಿಳಿಸಿದರು.

‘ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಮತ್ತು ಸಂತ್ರಸ್ತ ವಿದ್ಯಾರ್ಥಿ ಎರಡು ತಿಂಗಳ ಹಿಂದೆ ಜಗಳವಾಡಿಕೊಂಡಿದ್ದರು’ ಎಂದು  ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.