ADVERTISEMENT

ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಗ್ವಾಲಿಯರ್, ಒರಛಾ ಸೇರ್ಪಡೆ

ಪಿಟಿಐ
Published 7 ಡಿಸೆಂಬರ್ 2020, 13:03 IST
Last Updated 7 ಡಿಸೆಂಬರ್ 2020, 13:03 IST
ಯುನೆಸ್ಕೊ ಲಾಂಛನ
ಯುನೆಸ್ಕೊ ಲಾಂಛನ   

ಭೋಪಾಲ್‌: ಮಧ್ಯಪ್ರದೇಶದ ಐತಿಹಾಸಿಕ ಹಿನ್ನೆಲೆಯ ನಗರಗಳಾದ ಗ್ವಾಲಿಯರ್ ಮತ್ತು ಒರಛಾ ಈಗ ಯುನೆಸ್ಕೊ ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಸೇರಿದೆ ಎಂದು ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.

ಈ ಸೇರ್ಪಡೆಯು ರಾಜ್ಯದಲ್ಲಿ ಪ್ರವಾಸೋದ್ಯಮ ಪ್ರಗತಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ ಎಂದು ಪ್ರವಾಸೋದ್ಯಮ ಕ್ಷೇತ್ರದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುನೆಸ್ಕೊ ವಿಶ್ವಸಂಸ್ಥೆಯ ಭಾಗವಾಗಿದ್ದು, ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರ ರೂಪಿಸುವ ಮೂಲಕ ಶಾಂತಿ ಮತ್ತು ಭದ್ರತೆಗೆ ಒತ್ತು ನೀಡುತ್ತಿದೆ.

ADVERTISEMENT

ವಿಶ್ವದ ಪಾರಂಪರಿಕ ನಗರಗಳ ಪ‍ಟ್ಟಿಗೆ ಸೇರಿದ ಬಳಿಕ ಈ ಎರಡೂ ನಗರಗಳ ಚಿತ್ರಣವೇ ಬದಲಾಗಲಿದೆ. ಯುನೆಸ್ಕೊ ಜೊತೆಗೂಡಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಗರದ ಸೌಂದರ್ಯ ಇಮ್ಮಡಿಸಲು ಕ್ರಿಯಾಯೋಜನೆ ರೂಪಿಸಲಿದೆ. ಯುನೆಸ್ಕೊ ತಂಡ ರಾಜ್ಯಕ್ಕೆ ಮುಂದಿನ ವರ್ಷದಲ್ಲಿ ಭೇಟಿ ನೀಡಿ ಈ ಕುರಿತು ಚರ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೋಟೆಗಳ ನಗರವಾದ ಗ್ವಾಲಿಯರ್ 9ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಗುರ್ಜಾರ್ ಪ್ರತಿಹಾರ್ ರಾಜವಂಶ, ತೋಮರ್, ಬಘೇಲ್‌ ಕಚ್‌ವಾಹೊ, ಸಿಂಧಿಯಾ ಮನೆತನ ಆಡಳಿತವನ್ನು ನಡೆಸಿದ್ದವು. ಒರ್ಚಾ ನಗರವು ಇಲ್ಲಿರುವ ದೇವಸ್ಥಾನಗಳಿಂದಾಗಿ ಹೆಸರಾಗಿದೆ. 16ನೇ ಶತಮಾನದಲ್ಲಿ ಈ ನಗರ ಬುಂದೇಲರ ಆಡಳಿತದಲ್ಲಿ ರಾಜಧಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.