ADVERTISEMENT

‘ಜ್ಞಾನವಾಪಿ ಶಿವಲಿಂಗಕ್ಕೆ ನಾಳೆ ಪ್ರಾರ್ಥನೆ’

ಪಿಟಿಐ
Published 3 ಜೂನ್ 2022, 0:57 IST
Last Updated 3 ಜೂನ್ 2022, 0:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಣಸಿ: ಜ್ಞಾನವಾಪಿ ಸಂಕೀರ್ಣದ ಆವರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯ ಸಮೀಕ್ಷೆ ವೇಳೆ ಕಂಡುಬಂದ ಶಿವಲಿಂಗಕ್ಕೆ ತಮ್ಮಅನುಯಾಯಿಗಳೊಂದಿಗೆ ಜೂನ್ 4ರಂದು ಪ್ರಾರ್ಥನೆ ಸಲ್ಲಿಸುವುದಾಗಿಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಶಿಷ್ಯರೊಬ್ಬರುಘೋಷಿಸಿದ್ದಾರೆ.

ಇಲ್ಲಿ ಮಾತನಾಡಿದಸ್ವಾಮಿ ಅವಿಮುಕ್ತೇಶ್ವರಾನಂದ್‌ ಅವರು ‘ಜ್ಞಾನವಾಪಿ ಶಿವಲಿಂಗಕ್ಕೆ ಹಿಂದೂಗಳ ಪರ ನಾವು ಪ್ರಾರ್ಥನೆ ಸಲ್ಲಿಸಲು, ಅಗತ್ಯ ಪೂಜಾ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುತ್ತಿದ್ದೇವೆ. ನಾವು ರಾಜಕೀಯ ಹಿಂದೂಗಳಲ್ಲ, ನಿಜವಾದ ಹಿಂದೂಗಳು. ಶನಿವಾರ ಪ್ರಾರ್ಥನೆ ನಡೆಯಲಿದೆ’ ಎಂದು ಹೇಳಿದರು.

‘ಜ್ಞಾನವಾಪಿ ಆಡಳಿತವು ನಮ್ಮಪ್ರಾರ್ಥನೆ ತಡೆದರೆ, ಅದನ್ನುಗುಜರಾತ್‌ನ ದ್ವಾರಕಾ ಶಾರದಾ ಪೀಠ ಮತ್ತು ಬದರೀನಾಥದ ಜ್ಯೋತಿರ್ ಮಠದ ಪೀಠಾಧಿಪತಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಶಂಕರಾಚಾರ್ಯರ ಗಮನಕ್ಕೆ ತಂದು, ಅವರ ಸೂಚನೆಗಳನ್ನು ಪಾಲಿಸುತ್ತೇವೆ’ ಎಂದರು.

ADVERTISEMENT

‘ಧರ್ಮದ ವಿಷಯದಲ್ಲಿ ಧರ್ಮಾಚಾರ್ಯರ ತೀರ್ಮಾನವೇ ಅಂತಿಮ. ಸುಪ್ರೀಂ ಕೋರ್ಟ್ಕಾನೂನನ್ನು ವ್ಯಾಖ್ಯಾನಿಸಿದಂತೆ, ಧರ್ಮವನ್ನು ಧರ್ಮಾಚಾರ್ಯರು ವ್ಯಾಖ್ಯಾನಿಸುತ್ತಾರೆ. ಸನಾತನ ಧರ್ಮದಲ್ಲಿ, ಶಂಕರಾಚಾರ್ಯರು ದೊಡ್ಡ ಆಚಾರ್ಯರು ಮತ್ತು ಸ್ವರೂಪಾನಂದರು ಹಿರಿಯರು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.