ADVERTISEMENT

ಚಲಿಸುತ್ತಿದ್ದ ಆಟೋದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಪಿಟಿಐ
Published 15 ಜನವರಿ 2021, 13:41 IST
Last Updated 15 ಜನವರಿ 2021, 13:41 IST
   

ಹಿಸ್ಸಾರ್: ಹಿಸ್ಸಾರ್-ದೆಹಲಿ ಬೈಪಾಸ್ ರಸ್ತೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಆಟೋದಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕ ಮತ್ತುಆತನ ಸಹಚರನನ್ನು ಬಂಧಿಸಲಾಗಿದೆ.

ಬೈಪಾಸ್ ರಸ್ತೆಯಲ್ಲಿರುವ ತನ್ನ ಶಿಕ್ಷಣ ಸಂಸ್ಥೆಗೆ ಹೋಗಲು ಸಂತ್ರಸ್ತೆಯು ಇಲ್ಲಿರುವ ಕೆಂಚಿ ಚೌಕ್‌ನಿಂದ ಆಟೋರಿಕ್ಷಾ ಹತ್ತಿದಾಗ ಈ ಘಟನೆ ನಡೆದಿದೆಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್‌ ಅನ್ನು ತಲುಪಿದರೂ ಕೂಡ ಚಾಲಕ ಆಟೋವನ್ನು ಚಾಲನೇ ಮಾಡುತ್ತಲೇ ಇದ್ದ. ಈ ವೇಳೆ ಆತ ಮತ್ತು ಆತನ ಸಹಚರರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಗನ್‌ಮ್ಯಾನ್‌ ಅದೇ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ಆಟೋದಲ್ಲಿದ್ದ ವಿದ್ಯಾರ್ಥಿನಿಯ ಕೂಗು ಕೇಳಿಬಂದಿದೆ. ಬಳಿಕ ಆಕೆಯನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಆರೋಪಿಗಳನ್ನು ಶಿವನಗರದ ವಿನೋದ್ ಮತ್ತು ಇಲ್ಲಿನ ಭೈನಿ ಅಮೀರ್‌ಪುರ ಗ್ರಾಮದ ನಿವಾಸಿ ನವೀನ್ ಎಂದು ಗುರುತಿಸಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.