ADVERTISEMENT

ಮಾನವೀಯತೆ ಮೆರೆದಿದ್ದ ಜನಪ್ರತಿನಿಧಿ ಸುಷ್ಮಾ ಸ್ವರಾಜ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 12:45 IST
Last Updated 7 ಆಗಸ್ಟ್ 2019, 12:45 IST
   

ಮುಂಬೈ: ಮಾನವೀಯತೆ ಮತ್ತು ಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿಯಿಂದಲೇ ಸುಷ್ಮಾ ಸ್ವರಾಜ್ ಜನರ ಮನಸ್ಸಿನಲ್ಲಿ ನೆಲೆಯೂರಲು ಸಾಧ್ಯವಾಗಿದ್ದು. ವಿದೇಶಾಂಗ ಸಚಿವರಾಗಿದ್ದಾಗ ಟ್ವೀಟ್ ಮಾಡಿದರೆ ಸಾಕುಸುಷ್ಮಾ ಸ್ವರಾಜ್ ಅದಕ್ಕೆ ಓಗೊಟ್ಟು ಅಗತ್ಯ ಸಹಾಯಗಳನ್ನು ಮಾಡುತ್ತಿದ್ದರು. ಅವರೊಬ್ಬ ಜನಪ್ರತಿನಿಧಿ ಮಾತ್ರ ಅಲ್ಲ, ಅಮ್ಮನಂತಿದ್ದರು ಎಂದು ದೇಶದ ಜನತೆ ಸ್ಮರಿಸುತ್ತಿದ್ದಾರೆ.

ಘಟನೆ 1:
ಮೇರಾ ಮೇಡಂ ಮಹಾನ್
ಮುಂಬೈಯ ಎಂಜಿನಿಯರ್ ಒಬ್ಬರು 6 ವರ್ಷ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದರು.ಬೇಹುಗಾರಿಕೆಯ ಆರೋಪ ಅವರ ಮೇಲಿತ್ತು.ಆಗ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಆ ವ್ಯಕ್ತಿಯನ್ನು ಪಾಕ್ ಜೈಲಿನಿಂದ ಮುಕ್ತಗೊಳಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಪಾಕ್ ಜೈಲಿನಲ್ಲಿದ್ದ ಹಮೀದ್ ನಿಹಾಲ್ ಅನ್ಸಾರಿ ಬಿಡುಗಡೆಯಾಗಿದ್ದರು.

ನನಗೆ ಅವರ ಮೇಲೆ ತುಂಬಾ ಗೌರವ ಇದೆ. ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ.ಅವರು ನನಗೆ ಅಮ್ಮನಂತೆ.ನಾನು ಪಾಕಿಸ್ತಾನದಿಂದ ಮರಳಿದನಂತರ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಅವರು ನನಗೆ ಮಾರ್ಗದರ್ಶನ ನೀಡಿದ್ದರು. ಅವರ ಅಗಲುವಿಕೆ ನನ್ನ ಪಾಲಿಗೆ ತುಂಬಲಾರದ ನಷ್ಟ ಎಂದು ಅನ್ಸಾರಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಅನ್ಸಾರಿ ಅವರು 2012ರಲ್ಲಿ ಪಾಕ್‌ನಲ್ಲಿ ಬಂಧನಕ್ಕೊಳಗಾಗಿದ್ದರು.ಡಿಸೆಂಬರ್ 15, 2015ರಲ್ಲಿ ಮಿಲಿಟರಿ ಕೋರ್ಟ್ ಶಿಕ್ಷೆ ವಿಧಿಸಿದ್ದು, ಅವರನ್ನು ಪೇಶಾವರ್ ಸೆಂಟ್ರಲ್ ಜೈಲಿನಲ್ಲಿಡಲಾಗಿತ್ತು.

ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿ, ಸುಳ್ಳು ದಾಖಲೆ ಸೃಷ್ಟಿಸಿ ಇಲ್ಲಿ ಬೇಹುಗಾರಿಕೆ ಮಾಡಲು ಪ್ರಯತ್ನಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿತ್ತು.ಕಳೆದ ಡಿಸೆಂಬರ್‌ನಲ್ಲಿ ಅನ್ಸಾರಿ ಬಂಧಮುಕ್ತಗೊಂಡಿದ್ದರು.

ಪಾಕಿಸ್ತಾನದಿಂದ ಮರಳಿ ಬಂದ ಅನ್ಸಾರಿಯನ್ನು ಆಲಂಗಿಸಿ ಸುಷ್ಮಾ ದೇಶಕ್ಕೆ ಬರಮಾಡಿಕೊಂಡಿದ್ದರು. ಸುಷ್ಮಾ ಅವರು ನನ್ನನ್ನು ಆಲಿಂಗಿಸಿ ಮಗ ಎಂದು ಕರೆದಿದ್ದರು.ನಮ್ಮ ಮೇಲಿರುವ ಪ್ರೀತಿಯನ್ನು ಅವರಲ್ಲಿ ನಾನು ಕಂಡೆ, ನಮ್ಮ ದೇಶದ ಯುವ ಜನರಿಗೆ ನೀವು ಅಮ್ಮನಿಗಿಂತ ಕಮ್ಮಿಯೇನಲ್ಲ ಎಂದು ನಾನು ನನ್ನ ಸಹೋದರ ಹೇಳಿದ್ದೆವು.

ಮೇರಾ ಭಾರತ್ ಮಹಾನ್, ಮೇರಿ ಮೇಡಂ ಮಹಾನ್, ಸಬ್ ಮೇಡಂ ನೇಹೀ ಕಿಯಾ ಹೈ ( ನನ್ನ ಭಾರತ ಮಹಾನ್, ಮೇಡಂ ಮಹಾನ್, ಅವರೇ ಎಲ್ಲವನ್ನೂ ಮಾಡಿಕೊಟ್ಟಿದ್ದು)ಎಂದು ಅನ್ಸಾರಿ ಅವರು ಅಮ್ಮ ಫೌಜಿಯಾ ಹೇಳಿದ್ದಾರೆ.

ಘಟನೆ 2:
ಟಿವಿ ನಿರೂಪಕಕರಣ್‌ವೀರ್‌ಗೆ ಸಹಾಯ ಮಾಡಿದ್ದ ಸುಷ್ಮಾ
ವಿದೇಶ ರಾಷ್ಟ್ರದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಭಾರತೀಯರಿಗೆ ಸುಷ್ಮಾ ಸದಾ ಸಹಾಯ ಮಾಡುತ್ತಿದ್ದರು ಎಂದು ಟಿವಿ ನಿರೂಪಕ ಕರಣ್‌ವೀರ್ ಟ್ವೀಟಿಸಿದ್ದಾರೆ.

ಹರಿದ ಪಾಸ್‌ಪೋರ್ಟ್ ತೆಗೆದುಕೊಂಡುರಷ್ಯಾಗೆ ಪ್ರಯಾಣಿಸಿದ್ದಾಗ ನನ್ನನ್ನು ಅಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.ಆಗ ನನ್ನನ್ನು ಬಂಧಮುಕ್ತಗೊಳಿಸಿದ್ದು ಸುಷ್ಮಾ ಸ್ಮರಾಜ್ ಅಂತಾರೆ ಕರಣ್ ವೀರ್.

ಜನವರಿ ತಿಂಗಳಲ್ಲಿ ಕರಣ್‌ವೀರ್ ಬೊಹರಾ ಅವರು ಮೋಸ್ಕೊಗೆ ಪ್ರಯಾಣ ಬೆಳೆಸಿದ್ದರು.ಪಾಸ್‌ಪೋರ್ಟ್ ಹರಿದಿದ್ದ ಕಾರಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.ಆಗ ಕರಣ್‌ವೀಕ್ ಸಂಪರ್ಕಿಸಿದ್ದು ಭಾರತೀಯ ರಾಯಭಾರಿ ಕಚೇರಿಯನ್ನು. ಸುಷ್ಮಾ ಸ್ವರಾಜ್ ಅವರ ಮಧ್ಯ ಪ್ರವೇಶದಿಂದಾಗಿ ತಾತ್ಕಾಲಿಕ ಪಾಸ್‌ಪೋರ್ಟ್ ಸಿಕ್ಕಿತು ಎಂದಿದ್ದಾರೆ ಕರಣ್‌ವೀರ್.

ಘಟನೆ 3:

ಗೀತಾಳನ್ನು ಮರೆಯುವುದು ಹೇಗೆ?
ಸಲ್ಮಾನ್ ಖಾನ್‌ನ ಭಜರಂಗಿ ಭಾಯ್‌ಜಾನ್ ಕತೆಯಂತಿರುವ ಗೀತಾಳ ಕತೆಯನ್ನು ಭಾರತೀಯರು ಮರೆಯಲಾರರು.ಮೂಕಿ ಬಾಲಕಿ ಗೀತಾ ದಶಕದ ಹಿಂದೆ ಅರಿವಿಲ್ಲದೆ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಳು.ಆಗ ಆಕೆಗೆ 7 ಅಥವಾ 8 ವರ್ಷ.ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಒಬ್ಬಳೇ ಕುಳಿತಿದ್ದ ಬಾಲಕಿಯನ್ನು ಪಾಕಿಸ್ತಾನ್ ರೇಂಜರ್‌ಗಳು ಪತ್ತೆ ಹಚ್ಚಿದ್ದರು.

ಸುಷ್ಮಾ ನಿಧನ ವಾರ್ತೆ ಕೇಳಿ ಕಣ್ಣೀರಿಟ್ಟ ಗೀತಾ

ಈ ಬಾಲಕಿಯನ್ನುಈದಿ ಫೌಂಡೇಶನ್‌ನ ಬಲ್ಕೀಸ್ ಈದಿ ಅವರುದತ್ತು ಪಡೆದಿದ್ದರು.ಕರಾಚಿಯಲ್ಲಿ ವಾಸವಾಗಿದ್ದ ಗೀತಾ ಇಸ್ಲಾಮಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಳಿಸಿಕೊಟ್ಟ ಫೋಟೊ ನೋಡಿ ತಮ್ಮ ಅಪ್ಪ, ಮಲತಾಯಿ ಮತ್ತು ಸಹೋದರರನ್ನು ಗುರುತು ಹಿಡಿದಿದ್ದಳು. ಆಗ ರಾಯಭಾರಿಯಾಗಿದ್ದ ಟಿಸಿಎಂ ರಾಘವನ್ ಮತ್ತು ಅವರ ಪತ್ನಿ 2015 ಆಗಸ್ಟ್‌ನಲ್ಲಿ ಗೀತಾಳನ್ನು ಭೇಟಿ ಮಾಡಿದ್ದರು. ಆನಂತರ ಸುಷ್ಮಾ ಅವರ ಮಧ್ಯಪ್ರವೇಶದಿಂದ ಗೀತಾಳನ್ನು ಭಾರತಕ್ಕೆ ಕರೆತರಲಾಗಿತ್ತು.

ಗೀತಾ ಭಾರತಕ್ಕೆಮರಳಿದಾಗ ಆಕೆಗೆ 23 ವರ್ಷ. ಸುಷ್ಮಾ ಸ್ವರಾಜ್ ಗೀತಾಳಿಗೆ ವರನ್ವೇಷಣೆಯನ್ನೂ ಮಾಡಿದ್ದರು.

ಘಟನೆ 4:

ಸೌದಿ ಆರೇಬಿಯಾದಿಂದ ಜೈನಬಾಳನ್ನು ಕರೆತಂದ ಸುಷ್ಮಾ

ಸೌದಿ ಅರೇಬಿಯಾದಲ್ಲಿ ಲೈಂಗಿಕ ಕಿರುಕುಳ ಮತ್ತು ಮಾನಸಿಕ ದೌರ್ಜನ್ಯಕ್ಕೊಳಗಾಗಿ ಸಂಕಷ್ಟದಲ್ಲಿದ್ದ ಹೈದರಾಬಾದ್‌ನ ಜೈನಾಬಾಳನ್ನು ಕರೆತಂದದ್ದು ಕೂಡಾ ಸುಷ್ಮಾ ಸ್ವರಾಜ್.ಕಾಲಾಪತ್ತರ್ ನಿವಾಸಿ ಜೈನಬಾ2017 ಜೂನ್ 13ರಂದು ಕೆಲಸ ನಿಮಿತ್ತ ಸೌದಿ ಅರೇಬಿಯಾಗೆ ಹೋಗಿದ್ದರು. ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ 1200 ಸೌದಿ ರಿಯಾಲ್ ಸಂಬಳಕ್ಕೆ ಕೆಲಸ ಕೊಡಿಸುವುದಾಗಿ ಮೊಹಮ್ಮದ್ ಇಸ್ಮಾಯಿಲ್ ಎಂಬ ಟ್ರಾವೆಲ್ ಏಜೆಂಟ್ ಭರವಸೆ ನೀಡಿದ್ದನು. ಇಸ್ಮಾಯಿಲ್ ಮಾತು ನಂಬಿ ಸೌದಿ ಅರೇಬಿಯಾಗೆ ಪ್ರಯಾಣಿಸಿದ ಜೈನಬಾ ರಿಯಾದ್‌ಗೆ ತಲುಪಿದಾಗ ಆಕೆಯನ್ನು ಹೈಲ್ ಎಂಬಲ್ಲಿಗೆ ಕರೆದುಕೊಂಡು ಹೋಗಲಾಯಿತು.ಆಲ್ಲಿ ಆಕೆಯನ್ನು ಮನೆಯನ್ನು ಮನೆಕೆಲಸಕ್ಕಿರಿಸಿದ್ದು ಮಾತ್ರವಲ್ಲದೆ ಗೃಹ ಬಂಧನದಲ್ಲಿಡಲಾಗಿತ್ತು. ಒಂದು ದಿನ ಕಸ ಬಿಸಾಡಲೆಂದು ಮನೆಯಿಂದ ಹೊರಗೆ ಬಂದ ಈಕೆ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಬಂಗಾಳದ ವ್ಯಕ್ತಿಯೊಬ್ಬರಿಗೆ ತನ್ನ ಕತೆ ಹೇಳಿ ಸಹಾಯ ಯಾಚಿಸಿದ್ದರು ಜೈನಬಾ. ಆ ವ್ಯಕ್ತಿಯ ಸಹಾಯದಿಂದ ತನ್ನ ಮಗನೊಂದಿಗೆ ಮಾತನಾಡಿ, ಅಲ್ಲಿ ಅನುಭವಿಸುತ್ತಿದ್ದಕಷ್ಟದ ಬಗ್ಗೆ ವಿವರಿಸಿದ್ದರು.

ಜೈನಬಾ ಅವರ ಕುಟುಂಬ ಮಜಲೀಸ್ ಬಚಾವ್ ತೆಹರೀಕ್ ವಕ್ತಾರಅಮ್ಜೆದ್ ಉಲ್ಲಾಹ್ ಖಾನ್ ಅವರಿಗೆ ಈ ವಿಷಯ ತಿಳಿಸಿತ್ತು. ಖಾನ್ ಅವರು ಸುಷ್ಮಾ ಅವರಿಗೆ ವಿಷಯ ಮುಟ್ಟಿಸಿದ್ದು ಕೆಲವೇ ದಿನಗಳಲ್ಲಿ ಜೈನಬಾಳನ್ನು ರಕ್ಷಿಸಿ ಭಾರತಕ್ಕೆ ಕರೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.