ADVERTISEMENT

ದೆಹಲಿ: ಕೋವಿಡ್‌–19 ಚಿಕಿತ್ಸಾ ದರ ಶೇ 50 ಕಡಿತಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:17 IST
Last Updated 19 ಜೂನ್ 2020, 15:17 IST
ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಧಾ ಸತ್ಸಂಗ್‌ ಬೀಸ್‌ ಮೈದಾನದಲ್ಲಿ 10 ಸಾವಿರ ಬೆಡ್‌ಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಲಾಗಿದೆ –ಪಿಟಿಐ ಚಿತ್ರ 
ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಧಾ ಸತ್ಸಂಗ್‌ ಬೀಸ್‌ ಮೈದಾನದಲ್ಲಿ 10 ಸಾವಿರ ಬೆಡ್‌ಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಲಾಗಿದೆ –ಪಿಟಿಐ ಚಿತ್ರ    

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸಾ ದರವನ್ನು ಶೇ 50ಕ್ಕಿಂತ ಹೆಚ್ಚು ಕಡಿತಗೊಳಿಸಬೇಕು ಎಂದು ಉನ್ನತ ಮಟ್ಟದ ಸಮಿತಿಯೊಂದು ಶಿಫಾರಸು ಮಾಡಿದೆ.

ಪ್ರಸ್ತುತ ಐಸೊಲೇಷನ್‌ ಬೆಡ್‌ಗೆ ₹24–25 ಸಾವಿರ, ಐಸಿಯು ಬೆಡ್‌ಗೆ ₹34–43 ಸಾವಿರ ಹಾಗೂ ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗೆ ₹44–53 ಸಾವಿರ ದರವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಪಿಪಿಇ ಕಿಟ್‌ ದರ ಸೇರಿಲ್ಲ. ಈ ದರದ ಬದಲಾಗಿ ಪಿಪಿಇ ಕಿಟ್‌ ದರ ಸಹಿತಐಸೊಲೇಷನ್‌ ಬೆಡ್‌ಗೆ ₹8–10 ಸಾವಿರ, ಐಸಿಯು ಬೆಡ್‌ಗೆ ₹13–15 ಸಾವಿರ ಹಾಗೂ ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗೆ ₹15–18 ಸಾವಿರ ದರ ನಿಗದಿಗೊಳಿಸಬೇಕು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಕಳೆದ ಭಾನುವಾರ ದೆಹಲಿ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ಗಳ ಜೊತೆ ಸಭೆ ನಡೆಸಿದ್ದಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ತಂಡವನ್ನು ರಚಿಸಿದ್ದರು. ಸಮಿತಿಯ ಶಿಫಾರಸಿನ ಮೇರೆಗೆ ಎರಡು ದಿನಗಳ ಹಿಂದಷ್ಟೇ ಕೋವಿಡ್‌–19 ಪರೀಕ್ಷಾ ದರವನ್ನು ₹2,400 ನಿಗದಿಗೊಳಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.