ADVERTISEMENT

ಬಾಲಕಿ ಕೊಲೆ ಪ್ರಕರಣ; ಅತ್ಯಾಚಾರ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 20:00 IST
Last Updated 7 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಎರಡೂ ವರ್ಷ ವಯಸ್ಸಿನ ಬಾಲಕಿಯ ಹತ್ಯೆ ಮಾಡುವುದಕ್ಕೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಲೀಗಢ ಜಿಲ್ಲೆಯ ಗ್ರಾಮದಲ್ಲಿ ಕೃತ್ಯ ನಡೆದಿತ್ತು. ಪೋಷಕರು ಸಾಲ ಮರುಪಾವತಿಸಿಲ್ಲ ಎಂಬ ಆಕ್ರೋಶದಿಂದ ಭೀಕರವಾಗಿ ಬಾಲಕಿಯ ಕೊಲೆ ಮಾಡಿ, ಕಣ್ಣುಗಳನ್ನು ಕಿತ್ತು ಹಾಕಲಾಗಿತ್ತು. ಕೃತ್ಯಕ್ಕೆ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉತ್ತರ ಪ್ರದೇಶ ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ. ಅಲ್ಲದೆ, ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಇನ್‌ಸ್ಪೆಕ್ಟರ್‌ ಸೇರಿ ಐವರು ಪೊಲೀಸರನ್ನೂ ಅಮಾನತು ಮಾಡಿದೆ.

ADVERTISEMENT

ದುಷ್ಕರ್ಮಿಗಳು ಬಾಲಕಿಯ ಒಂದು ಕೈ ಕತ್ತರಿಸಿ ಹತ್ತಿರದ ಕಸದ ರಾಶಿಗೆ ಬಿಸಾಡಿದ್ದರು. ಅದನ್ನು ಪತ್ತೆ ಮಾಡಲಾಗಿದೆ. ‘ಶವವನ್ನು ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಲಾಗಿತ್ತು. ಶವ ಭಾಗಶಃ ಕೊಳೆತಿದ್ದು, ದೇಹದ ಹಲವೆಡೆ ಗಾಯದ ಗುರುತುಗಳಿದ್ದವು’ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.

‘ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ತಳ್ಳಿಹಾಕುವಂತಿಲ್ಲ. ಅದನ್ನು ದೃಢಪಡಿಸಿಕೊಳ್ಳಲು ವೈದ್ಯರ ನೆರವು ಕೋರಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೃತ್ಯಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಪೊಲೀಸರ ಅಮಾನತು: ಸಾಲ ಮರುಪಾವತಿ ಮಾಡದಿದ್ದಕ್ಕೆ ಮೂರು ವರ್ಷದ ಬಾಲಕಿಯನ್ನುಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಗುರುವಾರ ಅಮಾನತು ಮಾಡಲಾಗಿದೆ.

‘ಪ್ರಕರಣ ದಾಖಲಿಸುವಲ್ಲಿ ಹಾಗೂ ತನಿಖೆ ನಡೆಸುವಲ್ಲಿ ವಿಳಂಬ ಮಾಡಿರುವುದಕ್ಕೆ ಅಮಾನತು ಮಾಡಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಕಾಶ್‌ ಕಲ್ಹರಿ ತಿಳಿಸಿದ್ದದಾರೆ.

‘ಆರು ಮಂದಿಯ ಎಸ್‌ಐಟಿ ತಂಡವನ್ನು ರಚಿಸಲಾಗಿದ್ದು, ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಅಪರಾಧಿಗಳ ಕುಟುಂಬಸ್ಥರನ್ನೂ ಬಂಧಿಸಬೇಕು. ಕುಟುಂಬದವರೂ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಂದೆ ಬನ್ವಾರಿಲಾಲ್‌ ಶರ್ಮಾ ಅವರುಆಮರಣಾಂತ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ನಂತರ, ಪೊಲೀಸ್‌ ವರಿಷ್ಠಾಧಿಕಾರಿ ಆಕಾಶ್‌ ಕಲ್ಹರಿ ಭೇಟಿ ಮಾಡಿ ಉಪವಾಸ ಕೈಗೊಳ್ಳದಿರಲು ಮನವೊಲಿಸಿದರು.

ಬಾಲಕಿ ಹತ್ಯೆ: ಐವರು ಪೊಲೀಸರ ಅಮಾನತು

ಸಾಲ ಮರುಪಾವತಿ ಮಾಡದಿದ್ದಕ್ಕೆ ಮೂರು ವರ್ಷದ ಬಾಲಕಿಯನ್ನುಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಗುರುವಾರ ಅಮಾನತು ಮಾಡಲಾಗಿದೆ.

‘ಪ್ರಕರಣ ದಾಖಲಿಸುವಲ್ಲಿ ಹಾಗೂ ತನಿಖೆ ನಡೆಸುವಲ್ಲಿ ವಿಳಂಬ ಮಾಡಿರುವುದಕ್ಕೆ ಅಮಾನತು ಮಾಡಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಕಾಶ್‌ ಕಲ್ಹರಿ ತಿಳಿಸಿದ್ದದಾರೆ.

‘ಆರು ಮಂದಿಯ ಎಸ್‌ಐಟಿ ತಂಡವನ್ನು ರಚಿಸಲಾಗಿದ್ದು, ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಅಪರಾಧಿಗಳ ಕುಟುಂಬಸ್ಥರನ್ನೂ ಬಂಧಿಸಬೇಕು. ಕುಟುಂಬದವರೂ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಂದೆ ಬನ್ವಾರಿಲಾಲ್‌ ಶರ್ಮಾ ಅವರುಆಮರಣಾಂತ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ನಂತರ, ಪೊಲೀಸ್‌ ವರಿಷ್ಠಾಧಿಕಾರಿ ಆಕಾಶ್‌ ಕಲ್ಹರಿ ಭೇಟಿ ಮಾಡಿ ಉಪವಾಸ ಕೈಗೊಳ್ಳದಿರಲು ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.