ADVERTISEMENT

ಸಿಬಿಎಸ್‌ಇ: 10,12ನೇ ತರಗತಿ ವೇಳಾಪಟ್ಟಿ ನಾಳೆ ಘೋಷಣೆ

ಪಿಟಿಐ
Published 16 ಮೇ 2020, 20:00 IST
Last Updated 16 ಮೇ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸಿಬಿಎಸ್‌ಇ ಪಠ್ಯಕ್ರಮದ10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಾಕಿ ಇರುವ ಪರೀಕ್ಷೆಯ ವೇಳಾಪಟ್ಟಿಯನ್ನು ಮೇ 18ರಂದು ಘೋಷಿಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಶನಿವಾರ ತಿಳಿಸಿದೆ.

'ಪರೀಕ್ಷೆಯ ವೇಳಾಪಟ್ಟಿ ಅಂತಿಮಗೊಳಿಸುವ ಮೊದಲು ಕೆಲವು ತಾಂತ್ರಿಕ ವಿಷಯಗಳನ್ನು ಸಿಬಿಎಸ್‌ಇ ಪರಿಶೀಲಿಸುತ್ತಿದೆ. ಆದ್ದರಿಂದ ವೇಳಾಪಟ್ಟಿ ಬಿಡುಗಡೆ ಮುಂದೂಡಲಾಯಿತು' ಎಂದು ಸಚಿವ ರಮೇಶ್‌ ಪೋಖರಿಯಾಲ್‌ ನಿಶಂಕ್‌ ಟ್ವೀಟ್‌ ಮಾಡಿದ್ದಾರೆ. ಈ ಮೊದಲು ಶನಿವಾರ ಸಂಜೆ 5 ಗಂಟೆಗೆ ವೇಳಾಪಟ್ಟಿ ಪ್ರಕಟಿಸುವುದಾಗಿ ಸಚಿವಾಲಯ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT