ADVERTISEMENT

ಭಾರತದಲ್ಲಿ ತಯಾರಾದ ಲಸಿಕೆಯನ್ನು ನಾನು ಪಡೆದಿದ್ದೇನೆ: ಬ್ರಿಟನ್‌ ಪ್ರಧಾನಿ ಜಾನ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 9:48 IST
Last Updated 22 ಏಪ್ರಿಲ್ 2022, 9:48 IST
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: ಭಾರತದಲ್ಲಿ ತಯಾರಾದ ಕೋವಿಶೀಲ್ಡ್‌ ಲಸಿಕೆಯನ್ನು ತಾವು ಪಡೆದುಕೊಂಡಿರುವುದಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಶುಕ್ರವಾರ ಬಹಿರಂಗಪಡಿಸಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬೋರಿಸ್ ಜಾನ್ಸನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯ ‘ಹೈದರಾಬಾದ್‌ ಹೌಸ್‌’ನಲ್ಲಿ ಮಾತುಕತೆ ನಡೆಸಿದರು. ನಂತರ ಇಬ್ಬರೂ ನಾಯಕರು ಜಂಟಿ ಹೇಳಿಕೆ ನೀಡಿದರು.

ಈ ವೇಳೆ ಕೋವಿಡ್‌ ಲಸಿಕೆ ಕುರಿತು ಮಾತನಾಡುತ್ತಿದ್ದ ಬೋರಿಸ್‌ ಜಾನ್ಸನ್‌, ‘ನನ್ನ ತೋಳಿಗೆ ಭಾರತೀಯ ಲಸಿಕೆ ಹಾಕಲಾಗಿದೆ. ಭಾರತಕ್ಕೆ ನನ್ನ ಅನಂತ ನಮನಗಳು’ ಎಂದು ಹೇಳಿದರು.

ADVERTISEMENT

ಕೋವಿಶೀಲ್ಡ್‌ ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಔಷಧ ತಯಾರಕ ಸಂಸ್ಥೆ ‘ಆಸ್ಟ್ರಾಜೆನೆಕಾ’ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಅದನ್ನು ಭಾರತದಲ್ಲಿ ತಯಾರಿಸುವ ಹಕ್ಕನ್ನು ‘ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ ಪಡೆದುಕೊಂಡಿದೆ.

2021ರ ಡಿಸೆಂಬರ್‌ 2ರಲ್ಲಿ ಬೂಸ್ಟರ್‌ ಡೋಸ್‌ ಪಡೆದಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.