
ರಾಹುಲ್ ಗಾಂಧಿ
ಸಿವನಿ(ಮಧ್ಯಪ್ರದೇಶ):ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಸಮುದಾಯಗಳ ಮಹಿಳೆಯರ ಖಾತೆಗಳಿಗೆ ₹1 ಲಕ್ಷ ಜಮೆ ಮಾಡಲಿದೆ ಎಂದು ಸೋಮವಾರ ಘೋಷಿಸಿದರು.
ಮಧ್ಯಪ್ರದೇಶದ ಆದಿವಾಸಿ ಜನರೊಂದಿಗೆ ಸಂವಾದ ನಡೆಸಿದ ಅವರು, ‘ನೀವು ಭೂಮಿಯ ನಿಜವಾದ ಮಾಲೀಕರಾಗಿದ್ದು, ನಿಮ್ಮ ಸಮುದಾಯದ ಯಾವುದೇ ವ್ಯಕ್ತಿ ದೇಶದ ಉನ್ನತ 100 ಕಂಪನಿಗಳ ಪ್ರವರ್ತಕರಲ್ಲೊಬ್ಬರಾಗಲಿ, ಅವುಗಳ ವ್ಯವಸ್ಥಾಪನಾ ತಂಡದ ಭಾಗವಾಗಲಿ ಆಗಿಲ್ಲ’ ಎಂದು ಹೇಳಿದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮೂಲನಿವಾಸಿಗಳ ಭೂಮಿ ವಿಷಯವನ್ನು ಒಂದು ವರ್ಷದ ಒಳಗೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ರಾಹುಲ್, ‘ಬಿಜೆಪಿಯು ಉದ್ದೇಶಪೂರ್ವಕವಾಗಿ ‘ಆದಿವಾಸಿ’ ಜನರನ್ನು ‘ವನವಾಸಿ’ ಎಂದು ಕರೆಯುತ್ತಿದೆ. ಇದರ ಹಿಂದೆ ಅವರನ್ನು ಒಕ್ಕಲೆಬ್ಬಿಸುವ ಉದ್ದೇಶವಿದ್ದು, ನೀರು, ಅರಣ್ಯ ಮತ್ತು ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಅಡಗಿದೆ. ಅವರು ನಿಮ್ಮ ಭೂಮಿಯನ್ನು ಉದ್ಯಮಿಗಳಿಗೆ ನೀಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.