ADVERTISEMENT

ಗಾಳಿಯಿಂದ ನೀರು ಸಂಗ್ರಹಿಸುವ ತಂತ್ರಜ್ಞಾನ ಅಭಿವೃದ್ಧಿ

ಗುವಾಹಟಿ – ಭಾರತೀಯ ತಂತ್ರಜ್ಞಾನ ಸಂಸ್ಥೆ ಸಂಶೋಧಕರ ಪ್ರಯೋಗ

ಪಿಟಿಐ
Published 9 ಡಿಸೆಂಬರ್ 2020, 8:12 IST
Last Updated 9 ಡಿಸೆಂಬರ್ 2020, 8:12 IST
ಇಬ್ಬನಿ (ಸಾಂದರ್ಭಿಕ ಚಿತ್ರ)
ಇಬ್ಬನಿ (ಸಾಂದರ್ಭಿಕ ಚಿತ್ರ)   

ಗುವಾಹಟಿ: ‘ಹೈಡ್ರೋಫೋಬಿಸಿಟಿ‘ ಎಂಬ ಪರಿಕಲ್ಪನೆಯಡಿ ಗಾಳಿಯಿಂದ ನೀರು ಉತ್ಪಾದಿಸುವ ನೂತನ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಿರುವುದಾಗಿ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ–ಗುವಾಹಟಿ) ಸಂಶೋಧಕರು ಹೇಳಿದ್ದಾರೆ.

ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಉತ್ತಮ್ ಮನ್ನಾ ನೇತೃತ್ವದ, ಸಂಶೋಧನಾ ವಿದ್ಯಾರ್ಥಿಗಳಾದ ಕೌಸಿಕ್ ಮಾಜಿ, ಅವಿಜಿತ್ ದಾಸ್ ಮತ್ತು ಮಣಿದೀಪ ಧಾರ್ ಅವರ ತಂಡ, ಸಂಶೋಧನೆಯ ಫಲಿತಾಂಶದ ವರದಿಯುಳ್ಳ ಪ್ರಬಂಧವನ್ನು ಐಐಟಿ-ಗುವಾಹಟಿಯ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜರ್ನಲ್‌ನಲ್ಲಿ ಪ್ರಕಟಿಸಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

‘ಇಂಥ ಗಾಳಿಯಿಂದ ನೀರನ್ನು ಸಂಗ್ರಹಿಸುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹೈಡ್ರೊಫೊಬೊಸಿಟಿ ಅಥವಾ ಪರಿಸರದಲ್ಲಿ ಕೆಲವು ವಸ್ತುಗಳು ನೀರನ್ನು ಹೊರ ಹಾಕುವಂತಹ ಪರಿಕಲ್ಪನೆಯನ್ನು ಬಳಸಿಕೊಳ್ಳಲಾಗುತ್ತದೆ‘ ಎಂದು ಮನ್ನಾ ಹೇಳಿದರು.

ADVERTISEMENT

‘ತೇವಾಂಶವುಳ್ಳ ಗಾಳಿಯಿಂದ ನೀರನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಐಐಟಿ-ಗುವಾಹಟಿಯ ಸಂಶೋಧನಾ ತಂಡವು ಇದೇ ಮೊದಲ ಬಾರಿಗೆ ರಾಸಾಯನಿಕ ಮಾದರಿಯ ‘ಹೈಡ್ರೊಫಿಲಿಕ್‌ ಎಸ್‌ಎಲ್‌ಐಪಿಎಸ್(ಸ್ಲಿಪ್ಸ್‌)‘ ಪರಿಕಲ್ಪನೆಯನ್ನು ಬಳಸಿದೆ‘ ಎಂದು ಅವರು ಹೇಳಿದರು.

’ಎ4 ಅಳತೆಯ ಬಿಳಿ ಹಾಳೆಯ ಮೇಲೆ ಸ್ಪಂಜಿನಂತಹ ರಂಧ್ರಗಳಿರುವ ಪಾಲಿಮರಿಕ್ ವಸ್ತುವನ್ನು ಸಿಂಪಡಿಸುವ ಮೂಲಕ ಒಂದು ಮಾದರಿಯ ‘ಹೈಡ್ರೋಫಿಲಿಕ್ ಸ್ಲಿಪ್‌‘ ಉತ್ಪಾದಿಸಲಾಗಿದೆ‘ ಎಂದು ಮನ್ನಾ ಹೇಳಿದರು.

‘ಗಾಳಿಯನ್ನು ತಂಪಾಗಿಸುಂತಹ ಯಾವುದೇ ವ್ಯವಸ್ಥೆಗಳಿಲ್ಲದೇ ಈ ಪಾಲಿಮರಿಕ್ ವಸ್ತುವಿನ ಮೂಲಕ ಮಂಜು / ನೀರಿನ ಆವಿ ತುಂಬಿದ ಗಾಳಿಯಿಂದ ನೀರನ್ನು ಸಂಗ್ರಹಿಸಬಹುದು‘ ಎಂದು ಐಐಟಿ ಗುವಾಹಟಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.