ADVERTISEMENT

covid-19 india update: ಕೋವಿಡ್ ಪ್ರಮಾಣದಲ್ಲಿ ಗಣನೀಯ ಇಳಿಕೆ

ಪಿಟಿಐ
Published 4 ಮೇ 2023, 7:05 IST
Last Updated 4 ಮೇ 2023, 7:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 40,177ರಿಂದ 36,244ಕ್ಕೆ ಇಳಿಕೆ ಕಂಡಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ. ಈ ಮೂಲಕ ಕೊರೊನಾ ಸೋಂಕು ಹರಡುವ ಪ್ರಮಾಣ ಇಳಿದಿದೆ.

ದೇಶದಲ್ಲಿ ಕೋವಿಡ್ ಹೊಸ ಪ್ರಕರಣ 3,962 ದಾಖಲಾಗಿದೆ. ಕೇರಳದಲ್ಲಿ ಏಳ ಜನರು ಸೇರಿ ಸೋಂಕಿಗೆ 22 ಜನರು ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 5,31,606ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.

ಚೇತರಿಕೆ ದರವು 98.73 ದಾಖಲಾಗಿದ್ದು, ಇದುವರೆಗೆ ರೋಗದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,43,92,828ಕ್ಕೆ ಏರಿದೆ.

ADVERTISEMENT

ಕೊರೊನಾ ಸೋಂಕಿನಿಂದ ಸಾವಿನ ಪ್ರಮಾಣವು ಶೇ 1.18 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.