ADVERTISEMENT

ರಕ್ಷಣಾ, ಮಿಲಿಟರಿ ಸಹಕಾರ ವೃದ್ಧಿಗೆ ಭಾರತ–ಬ್ರೆಜಿಲ್ ಮಾತುಕತೆ

ಪಿಟಿಐ
Published 31 ಜುಲೈ 2025, 7:39 IST
Last Updated 31 ಜುಲೈ 2025, 7:39 IST
   

ಬ್ರೆಜಿಲ್: ಭಾರತ ಮತ್ತು ಬ್ರೆಜಿಲ್‌ನ ಉನ್ನತ ಅಧಿಕಾರಿಗಳು ಬ್ರೆಜಿಲ್‌ನಲ್ಲಿ ಪ್ರಮುಖ ರಕ್ಷಣಾ ಸಭೆಯನ್ನು ನಡೆಸಿದ್ದು, ಇಂಡೋ-ಪೆಸಿಫಿಕ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಮಿಲಿಟರಿ ಸಹಕಾರ ಮತ್ತು ರಕ್ಷಣಾ ಉದ್ಯಮ ಸಂಬಂಧಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರು ಎಂದು ವರದಿ ತಿಳಿಸಿದೆ.

8ನೇ ಜಂಟಿ ರಕ್ಷಣಾ ಸಮಿತಿ ಸಭೆಯು ಜುಲೈ 30ರಂದು ಬ್ರೆಸಿಲಿಯಾದಲ್ಲಿ ನಡೆಯಿತು ಎಂದು ಭಾರತೀಯ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಶ್ವೇಶ್ ನೇಗಿ ಹಾಗೂ ಬ್ರೆಜಿಲ್‌ನ ನೀತಿ ಮತ್ತು ಕಾರ್ಯತಂತ್ರದ ಉಪ ಮುಖ್ಯಸ್ಥ ಮೇಜರ್ ಜನರಲ್ ವಿಲೇನ್ ಕೋಜಿ ಕಮೈ ನೇತೃತ್ವದಲ್ಲಿ, ಇಂಡೋ-ಪೆಸಿಫಿಕ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮಿಲಿಟರಿ ಸಹಕಾರ, ತರಬೇತಿ, ರಕ್ಷಣಾ ಉದ್ಯಮ ಸಂಬಂಧಗಳು ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸುವತ್ತ ಗಮನಹರಿಸುವ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಸಚಿವಾಲಯವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ADVERTISEMENT

ಸಭೆಯ ಚಿತ್ರಗಳನ್ನೂ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.