ADVERTISEMENT

ಭಾರತಕ್ಕೆ ಚೀನಾ ‘ಪ್ರಮುಖ ಶತ್ರು’: ಡಿಐಎ ವರದಿ

ಪಿಟಿಐ
Published 25 ಮೇ 2025, 23:29 IST
Last Updated 25 ಮೇ 2025, 23:29 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ನವದೆಹಲಿ: ಪಾಕಿಸ್ತಾನದ ಜತೆಗೆ ಈಚೆಗಿನ ಮಿಲಿಟರಿ ಸಂಘರ್ಷದ ಹೊರತಾಗಿಯೂ ಭಾರತವು ಚೀನಾವನ್ನು ತನ್ನ ‘ಪ್ರಮುಖ ಶತ್ರು’ವಾಗಿ ಪರಿಗಣಿಸಿದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ (ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ–ಡಿಐಎ) ಈಚೆಗಿನ ವರದಿ ತಿಳಿಸಿದೆ.

‘ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಮೇ ಮಧ್ಯದಲ್ಲಿ ಗಡಿಯಾಚೆಗಿನ ದಾಳಿಗಳನ್ನು ನಡೆಸಿವೆಯಾದರೂ ಭಾರತವು ಚೀನಾವನ್ನು ಪ್ರಮುಖ ಶತ್ರುವಾಗಿ ಪರಿಗಣಿಸುತ್ತದೆ. ಪಾಕಿಸ್ತಾನವನ್ನು ತನ್ನ ಭದ್ರತೆಗೆ ಸಣ್ಣಮಟ್ಟಿನ ಸಮಸ್ಯೆ ಒಡ್ಡಬಲ್ಲ ರಾಷ್ಟ್ರವಾಗಿ ಪರಿಗಣಿಸುತ್ತದೆ’ ಎಂದು ವರದಿ ಹೇಳಿದೆ.

ADVERTISEMENT

‘ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಗಳು ಜಾಗತಿಕ ನಾಯಕತ್ವವನ್ನು ಪ್ರದರ್ಶಿಸುವುದು, ಚೀನಾವನ್ನು ಎದುರಿಸುವುದು ಮತ್ತು ಭಾರತದ ಸೇನೆಯ ಬಲವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿವೆ’ ಎಂಬ ಅಂಶ ವರದಿಯಲ್ಲಿದೆ.

ಚೀನಾದ ಪ್ರಭಾವವನ್ನು ಸಮರ್ಥವಾಗಿ ಎದುರಿಸಲು ಮತ್ತು ತನ್ನ ‘ಜಾಗತಿಕ ನಾಯಕತ್ವ’ದ ಪಾತ್ರವನ್ನು ಹೆಚ್ಚಿಸಲು ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವಿಪಕ್ಷೀಯ ರಕ್ಷಣಾ ಪಾಲುದಾರಿಕೆಗೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದೆ.

‘ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ನಿಯೋಜಿಸಿದ್ದ ಸೇನೆಯನ್ನು ಎರಡೂ ದೇಶಗಳು ಕಳೆದ ವರ್ಷ ಹಿಂದಕ್ಕೆ ಪಡೆದುಕೊಂಡದ್ದು ಗಡಿ ಗುರುತು ನಿಗದಿಪಡಿಸುವ ಬಗ್ಗೆ ಭಾರತ–ಚೀನಾ ನಡುವೆ ದೀರ್ಘ ಕಾಲದಿಂದ ಇರುವ ವಿವಾದವನ್ನು ಬಗೆಹರಿಸಲಿಲ್ಲ. 2020ರಲ್ಲಿ ನಡೆದ ಘರ್ಷಣೆಯ ಬಳಿಕ ಉಂಟಾಗಿದ್ದ ಉದ್ವಿಗ್ನತೆಯನ್ನು ಮಾತ್ರ ಕಡಿಮೆ ಮಾಡಿದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.