ADVERTISEMENT

ಭಾರತ–ಇಯು ಮಧ್ಯೆ ವರ್ಷಾಂತ್ಯಕ್ಕೆ ಮುಕ್ತ ವ್ಯಾಪಾರ ಒಪ್ಪಂದ

ಪ್ರಧಾನಿ ಮೋದಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ನಿರ್ಧಾರ 

ಪಿಟಿಐ
Published 28 ಫೆಬ್ರುವರಿ 2025, 12:57 IST
Last Updated 28 ಫೆಬ್ರುವರಿ 2025, 12:57 IST
<div class="paragraphs"><p>ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ&nbsp;ಪ್ರಧಾನಿ ಮೋದಿ</p></div>

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಪ್ರಧಾನಿ ಮೋದಿ

   

(ಚಿತ್ರ ಕೃಪೆ–@narendramodi)

ನವದೆಹಲಿ: ರಕ್ಷಣೆ, ಭದ್ರತೆ ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ-ಐರೋಪ್ಯ ಒಕ್ಕೂಟವು (ಇಯು) ವ್ಯೂಹಾತ್ಮಕ ಪಾಲುದಾರಿಕೆ ವಿಸ್ತರಿಸಲು ಸಂಕಲ್ಪ ಮಾಡಿದ್ದು, ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದವನ್ನು ಈ ವರ್ಷದ ಅಂತ್ಯದೊಳಗೆ ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಶುಕ್ರವಾರ ನಿರ್ದೇಶನ ನೀಡಿದ್ದಾರೆ.

ADVERTISEMENT

ವ್ಯಾಪಾರ ಮತ್ತು ಸುಂಕದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತದ ನೀತಿಯ ಬಗ್ಗೆ ಜಾಗತಿಕ ಕಳವಳ ಹೆಚ್ಚುತ್ತಿರುವುದರ ನಡುವೆ ಉಭಯ ನಾಯಕರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

‘ಎರಡೂ ಕಡೆಯವರು ಹೂಡಿಕೆ ಸಂರಕ್ಷಣಾ ಒಪ್ಪಂದ ಮತ್ತು ಜಿಐ (ಭೌಗೋಳಿಕ ಸೂಚ್ಯಂಕ) ಕುರಿತಾದ ಒಪ್ಪಂದಕ್ಕಾಗಿ ಮಾತುಕತೆಗಳು ಮುಂದುವರಿಯುವುದನ್ನು ಎದುರು ನೋಡುತ್ತಿದ್ದಾರೆ. ಸಂಪರ್ಕ ಬೆಸೆಯುವ ಭಾರತ-ಪಶ್ಚಿಮ ಏಷ್ಯಾ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಅನುಷ್ಠಾನಕ್ಕೂ ದೃಢವಾದ ಹೆಜ್ಜೆ ಇರಿಸುತ್ತೇವೆ. ಈ ಕಾರಿಡಾರ್ ಜಾಗತಿಕ ವಾಣಿಜ್ಯ, ಸುಸ್ಥಿರ ಬೆಳವಣಿಗೆ ಮತ್ತು ಸಮೃದ್ಧಿಗೆ ಚಾಲನೆ ನೀಡುವ ಎಂಜಿನ್ ಆಗುವ ವಿಶ್ಪಾಸವಿದೆ’ ಎಂದು ಮೋದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.