ADVERTISEMENT

Covid-19 India Updates: 16,326 ಹೊಸ ಪ್ರಕರಣ, 666 ಸಾವು

ಪಿಟಿಐ
Published 23 ಅಕ್ಟೋಬರ್ 2021, 4:50 IST
Last Updated 23 ಅಕ್ಟೋಬರ್ 2021, 4:50 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 16,326 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 666 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಈವರೆಗಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,41,59,562ಕ್ಕೆ ಏರಿದ್ದು, ದೇಶದಲ್ಲಿ ಈಗ 1,73,728 ಸಕ್ರಿಯ ಪ್ರಕರಣಗಳಿವೆ. ಇದು 233 ದಿನಗಳಲ್ಲಿಯೇ ಕಡಿಮೆಯಾಗಿದೆ.

ಹೊಸ ಕೋವಿಡ್ ಪ್ರಕರಣಗಳ ದೈನಂದಿನ ಹೆಚ್ಚಳವು ಸತತ 29 ದಿನಗಳಿಂದ 30,000ಕ್ಕಿಂತ ಕಡಿಮೆ ಇದೆ ಮತ್ತು ಸತತ 118 ದಿನಗಳಿಂದ 50,000 ಕ್ಕಿಂತ ಕಡಿಮೆ ಇದೆ.

ADVERTISEMENT

ಕೋವಿಡ್ ದೃಢ ಪ್ರಮಾಣ ಶೇಕಡಾ 0.51ಕ್ಕೆ ಇಳಿದಿದ್ದು, ಮಾರ್ಚ್ 2020ರ ನಂತರದ ಕಡಿಮೆ ಮಟ್ಟದ್ದಾಗಿದೆ. ಕೋವಿಡ್-19 ರಾಷ್ಟ್ರೀಯ ಚೇತರಿಕೆ ದರವು ಶೇಕಡಾ 98.16 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

24 ಗಂಟೆಗಳ ಅವಧಿಯಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆಯಲ್ಲಿ 2,017 ರಷ್ಟು ಇಳಿಕೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.