ADVERTISEMENT

1951ರಿಂದ 2023ರ ವರೆಗೆ ಮತದಾರರ ಸಂಖ್ಯೆ 6 ಪಟ್ಟು ಹೆಚ್ಚಳ

ಪಿಟಿಐ
Published 6 ಫೆಬ್ರುವರಿ 2023, 5:44 IST
Last Updated 6 ಫೆಬ್ರುವರಿ 2023, 5:44 IST
voting
voting   

1951ರಿಂದ 2023ರ ವರೆಗೆ ಮತದಾರರ ಸಂಖ್ಯೆಯಲ್ಲಿ ಆರು ಪಟ್ಟು ಹೆಚ್ಚಳ ದಾಖಲಾಗಿದೆ. 2023ರ ಜನವರಿಯ ಮಾಹಿತಿ ಪ್ರಕಾರ, 94.50 ಕೋಟಿ ಮತದಾರರು ದೇಶದಲ್ಲಿ ಇದ್ದಾರೆ. ಮತದಾರರ ಸಂಖ್ಯೆಯ ಜೊತೆಗೆ ಮತ ಚಲಾಯಿಸುವವರ ಪ್ರಮಾಣವು ಹೆಚ್ಚುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವರೆಗಿನ ಗರಿಷ್ಠ ಅಂದರೆ, ಶೇ 67.40ರಷ್ಟು ಮತದಾನವಾಗಿತ್ತು. ಹಾಗಿದ್ದರೂ ಶೇ 32.6ರಷ್ಟು ಜನರು ಮತದಾನದಿಂದ ದೂರ ಉಳಿದಿದ್ದರು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು ವಲಸಿಗರಿಗಾಗಿ ರೂಪಿಸಿರುವ ಮತಯಂತ್ರ ವ್ಯವಸ್ಥೆ ಜಾರಿಗೆ ತರುವ ಕುರಿತು ಚಿಂತನೆ ನಡೆಸಿದೆ

* 2019ರ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸಂಖ್ಯೆಯು ಶೇ 75ರಷ್ಟನ್ನು ದಾಟಿದ್ದರೂ 30 ಕೋಟಿ ಮಂದಿ ಮತದಾನ ಮಾಡಿರಲಿಲ್ಲ. ಈ ಸಂಖ್ಯೆಯಲ್ಲಿ ನಗರ ವಾಸಿಗಳು, ಯುವಜನರು ಹಾಗೂ ವಲಸೆ ಕಾರ್ಮಿಕರು ಹೆಚ್ಚಿದ್ದಾರೆ

* ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಗರವಾಸಿಗಳು ಮತದಾನಕ್ಕೆ ನಿರಾಸಕ್ತಿ ತೋರಿದ್ದಾರೆ ಎಂದು ಆಯೋಗ ಹೇಳಿದೆ

ADVERTISEMENT

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.