ADVERTISEMENT

ಮಾನವೀಯ ನೆರವು: ಬರಪೀಡಿತ ಮಲಾವಿಗೆ 1,000 ಮೆಟ್ರಿಕ್ ಟನ್ ಅಕ್ಕಿ ರವಾನಿಸಿದ ಭಾರತ

ಪಿಟಿಐ
Published 8 ಸೆಪ್ಟೆಂಬರ್ 2024, 6:20 IST
Last Updated 8 ಸೆಪ್ಟೆಂಬರ್ 2024, 6:20 IST
<div class="paragraphs"><p>ಅಕ್ಕಿಯನ್ನು  ಕೊಂಡೊಯ್ಯುತ್ತಿರುವ ವ್ಯಕ್ತಿ </p></div>

ಅಕ್ಕಿಯನ್ನು ಕೊಂಡೊಯ್ಯುತ್ತಿರುವ ವ್ಯಕ್ತಿ

   

–ರಾಯಿಟರ್ಸ್ ಚಿತ್ರ

ನವದೆಹಲಿ: ತೀವ್ರ ಬರಪೀಡಿತ ಮಲಾವಿಗೆ ಮಾನವೀಯ ನೆರವಿನ ಭಾಗವಾಗಿ ಭಾರತವು 1,000 ಮೆಟ್ರಿಕ್ ಟನ್ ಅಕ್ಕಿಯನ್ನು ರವಾನಿಸಿದೆ ಎಂದು ವರದಿಯಾಗಿದೆ.

ADVERTISEMENT

ಪೂರ್ವ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಮಳೆ ಕೊರತೆ ಎದುರಾಗಿದೆ. ವಿಶೇಷವಾಗಿ ಮಲಾವಿ ತೀವ್ರ ಬರಗಾಲದಿಂದ ತತ್ತರಿಸಿದೆ. ಇದರಿಂದಾಗಿ ಆಹಾರ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

‘ಭಾರತವು ಮಾನವೀಯ ನೆರವು ಒದಗಿಸುವ ಮೂಲಕ ಮಲಾವಿಯ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಸಂದೇಶವನ್ನು ರವಾನಿಸಿದೆ. ಎಲ್‌ ನಿನೊ ವಿದ್ಯಮಾನದಿಂದ ಉಂಟಾದ ಭೀಕರ ಬರಗಾಲದ ಪರಿಣಾಮಗಳನ್ನು ಪರಿಹರಿಸಲು 1,000 ಮೆಟ್ರಿಕ್ ಟನ್ ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಇಂದು ಮಲಾವಿಗೆ ತಲುಪಿಸಲಾಗುವುದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ‘ಎಕ್ಸ್‌’ನಲ್ಲಿ ಮಾಹಿತಿ ನೀಡಿದ್ದಾರೆ.

‌ಮಲಾವಿಯ 28 ಜಿಲ್ಲೆಗಳ ಪೈಕಿ 23 ಜಿಲ್ಲೆಗಳು ತೀವ್ರ ಬರಪೀಡಿತ ಎಂದು ಮಾರ್ಚ್‌ನಲ್ಲಿ ಸರ್ಕಾರ ಘೋಷಿಸಿತ್ತು. ಶುಷ್ಕ ಹವಾಮಾನವು ‌ಮಲಾವಿಯಲ್ಲಿ ಆಹಾರ ಪೂರೈಕೆಯನ್ನು ತೀವ್ರವಾಗಿ ಕುಂಠಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.