ADVERTISEMENT

ಎರಡನೇ ಬಾರಿಯೂ ‘ಪ್ರಳಯ’ ಕ್ಷಿಪಣಿಯ ಯಶಸ್ವಿ ಪ್ರಯೋಗ

ಪಿಟಿಐ
Published 23 ಡಿಸೆಂಬರ್ 2021, 10:38 IST
Last Updated 23 ಡಿಸೆಂಬರ್ 2021, 10:38 IST
‘ಪ್ರಳಯ’ ಕ್ಷಿಪಣಿಯ ಯಶಸ್ವಿ ಪ್ರಯೋಗ
‘ಪ್ರಳಯ’ ಕ್ಷಿಪಣಿಯ ಯಶಸ್ವಿ ಪ್ರಯೋಗ   

ಬಾಲಾಸೋರ್ (ಒಡಿಶಾ): ಸ್ವದೇಶಿ ನಿರ್ಮಿತ, ಗರಿಷ್ಠ 500 ಕಿ.ಮೀ ಅಂತರದ ಗುರಿಯನ್ನು ತಲುಪಬಲ್ಲ, ನೆಲದಿಂದ ನೆಲಕ್ಕೆ ಉಡಾಯಿಸುವ ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಸತತ ಎರಡನೇ ದಿನವಾದ ಗುರುವಾರವೂ ಯಶಸ್ವಿಯಾಗಿ ನಡೆಸಲಾಯಿತು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಿದ್ದು, ದೃಢ ಮತ್ತು ಹೆಚ್ಚು ಸಾಮರ್ಥ್ಯದ ಮೋಟರ್, ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅತ್ಯಾಧುನಿಕ ದಿಕ್ಸೂಚಿ ಮತ್ತು ಇತರೆ ಸೌಲಭ್ಯಗಳನ್ನು ಈ ಕ್ಷಿಪಣೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.